
Belagavi ಯಲ್ಲಿ ಗಣೇಶ ವಿಸರ್ಜನೆ ವೇಳೆ ಘೋರ ದುರಂತ – ಕೆರೆಯಲ್ಲಿ ಮುಳುಗಿ ಯುವಕ ಸಾವು!
ಗಣೇಶ ವಿಸರ್ಜನೆಗೆ ತೆರಳಿದ್ದ ಯುವಕನೊಬ್ಬ ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ. ಮಚ್ಛೆ ಗ್ರಾಮದ ನಿವಾಸಿ ವಿಶ್ವೇಶ್ ನಾಯಕ್ (20) ಮೃತಪಟ್ಟ ದುರ್ದೈವಿ. ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಯುವಕನ ಸಾವಿನಿಂದ ಇದೀಗ ಶೋಕದ ವಾತಾವರಣ ನಿರ್ಮಾಣವಾಗಿದೆ.
READ THIS : ಹೆಡ್ಫೋನ್ ಹಾಕಿಕೊಂಡು ಹಳಿ ದಾಟುವಾಗ ರೈಲು ಡಿಕ್ಕಿ – ವಿದ್ಯಾರ್ಥಿನಿ ದಾರುಣ ಸಾವು!
ಆಗಿದ್ದೇನು?
ವಿಶ್ವೇಶ್ ತನ್ನ ಸ್ನೇಹಿತರೊಂದಿಗೆ ಗಣೇಶ ಮೂರ್ತಿ ವಿಸರ್ಜನೆಗಾಗಿ ಗ್ರಾಮದ ಕೆರೆಗೆ ತೆರಳಿದ್ದ. ಗಣೇಶ ಮೂರ್ತಿಯನ್ನು ನೀರಿಗಿಳಿಸಿ ವಾಪಸ್ ದಡಕ್ಕೆ ಬರುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಸ್ನೇಹಿತರ ಕಣ್ಣೆದುರೇ ಯುವಕ ನೀರಿನಲ್ಲಿ ಮುಳುಗಿದ್ದು, ಈ ದೃಶ್ಯ ಅಲ್ಲಿದ್ದವರ ಮೊಬೈಲ್ ಕ್ಯಾಮೆರಾದಲ್ಲೂ ಸೆರೆಯಾಗಿದೆ.

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಕೆರೆಯಲ್ಲಿ ಸುದೀರ್ಘ ಶೋಧ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಳಿಕ ವಿಶ್ವೇಶ್ನ ಮೃತದೇಹವನ್ನು ಹೊರತೆಗೆದಿದ್ದಾರೆ.
Belagavi – ಪ್ರಕರಣ ದಾಖಲು!
ಘಟನೆಗೆ ಸಂಬಂಧಿಸಿದಂತೆ Belgavi ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
MUST WATCH : ನಮ್ಮೆಲ್ಲರ ಒಗ್ಗಟ್ಟು ನೋಡಿದ್ರೆ NDA ಗೆಲ್ಲುತ್ತೆ -ತುಮಕೂರಲ್ಲಿ NDA ಅಭ್ಯರ್ಥಿ SURESH ಹೇಳಿಕೆ




