
MAHARASHTRA : ರೈಲು ಬರುತ್ತಿದ್ದರೂ ಕೇಳಿಸಲಿಲ್ಲ..! ಇಯರ್ಫೋನ್ ಹಾಕಿಕೊಂಡು ಮಾತನಾಡುತ್ತಿದ್ದ ವಿದ್ಯಾರ್ಥಿನಿ ದಾರುಣ ಸಾವು
ಕಿವಿಯಲ್ಲಿ ಇಯರ್ಫೋನ್ ಹಾಕಿಕೊಂಡು ಮೊಬೈಲ್ನಲ್ಲಿ ಮಾತನಾಡುತ್ತಾ ರೈಲು ಹಳಿಯ ಬಳಿ ನಡೆದುಕೊಂಡು ಹೋಗುತ್ತಿದ್ದ 17 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ರೈಲು ಡಿಕ್ಕಿ ಹೊಡೆದು ಮೃತಪಟ್ಟಿರುವ ದಾರುಣ ಘಟನೆ MAHARASHTRA ದಲ್ಲಿ ನಡೆದಿದೆ.
ಆಗಿದ್ದೇನು?
ಮೃತ ವಿದ್ಯಾರ್ಥಿನಿಯನ್ನು ಇಚಲಕರಂಜಿಯ ಅನುಷ್ಕಾ ಸಂತೋಷ್ ಪವಾರ್ ಎಂದು ಗುರುತಿಸಲಾಗಿದೆ. ಅನುಷ್ಕಾ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಹತ್ಕಣಂಗಲೆ ಪ್ರದೇಶಕ್ಕೆ ತೆರಳಿದ್ದ ವೇಳೆ ರೈಲು ಹಳಿ ಸಮೀಪ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಅನುಷ್ಕಾ ಕಿವಿಯಲ್ಲಿ ಇಯರ್ಫೋನ್ ಹಾಕಿಕೊಂಡು ಮೊಬೈಲ್ನಲ್ಲಿ ಮಾತನಾಡುತ್ತಾ ಸಾಗುತ್ತಿದ್ದಳು. ಹಿಂದಿನಿಂದ ವೇಗವಾಗಿ ಬಂದ ಧನ್ಬಾದ್ ಎಕ್ಸ್ಪ್ರೆಸ್ ರೈಲಿನ ಶಬ್ದ ಆಕೆಗೆ ಕೇಳಿಸಿರಲಿಲ್ಲ ಎನ್ನಲಾಗಿದೆ.
READ THIS : ಘೋರ ದುರಂತ – ಟ್ರ್ಯಾಕ್ಟರ್ಗೆ ಸಿಲುಕಿ ಬಾಲಕಿ ದಾರುಣ ಸಾವು!

ರೈಲು ಸಮೀಪಿಸುತ್ತಿರುವುದನ್ನು ಗಮನಿಸಿದ ಸ್ನೇಹಿತೆಯರು ಅನುಷ್ಕಾಗೆ ಪಕ್ಕಕ್ಕೆ ಸರಿಯುವಂತೆ ಜೋರಾಗಿ ಕೂಗಿ ಎಚ್ಚರಿಕೆ ನೀಡಿದರೂ, ಇಯರ್ಫೋನ್ ಧರಿಸಿದ್ದ ಕಾರಣ ಆಕೆಗೆ ಅವರ ಕೂಗು ಕೇಳಿಸಲಿಲ್ಲ. ಸ್ನೇಹಿತೆಯರು ನೋಡುತ್ತಿದ್ದಂತೆಯೇ ರೈಲು ಅನುಷ್ಕಾಗೆ ಡಿಕ್ಕಿ ಹೊಡೆದಿದೆ.
MAHARASHTRA – ವಿದ್ಯಾರ್ಥಿನಿ ದಾರುಣ ಸಾವು!
ಇನ್ನು ಡಿಕ್ಕಿಯ ರಭಸಕ್ಕೆ ಅನುಷ್ಕಾ ದೂರಕ್ಕೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಹಾಗೂ ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ.

MUST WATCH : ತುಮಕೂರಲ್ಲಿ ಸರ್ಕಾರ ಜಾಗ ಒತ್ತುವರಿ ತಾಲೂಕು ಆಡಳಿತದಿಂದ ತೆರವು ಕಾರ್ಯ




