
Bengaluru : ಪಾಳು ಬಿದ್ದ ಸೈಟ್ನಲ್ಲಿ ಮಹಿಳೆಯ ಶವ ಪತ್ತೆ.!
ಬೆಂಗಳೂರು ನಗರದ ಎಂ.ಎಸ್. ನಗರದ ಅಗ್ರಹಾರ ಲೇಔಟ್ನ ಖಾಲಿ ನಿವೇಶನವೊಂದರಲ್ಲಿ ಹಾಸಿಗೆಯಲ್ಲಿ ಸುತ್ತಿ ಎಸೆಯಲಾಗಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೂಟೆಯಂತಿದ್ದ ಹಾಸಿಗೆಯೊಂದರಲ್ಲಿ ಮೃತದೇಹ!
ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ, ನಿವೇಶನದ ಮಾಲೀಕರು ಜಾಗದಲ್ಲಿದ್ದ ಗಿಡ-ಗಂಟಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದರು. ಈ ವೇಳೆ ಮೂಟೆಯಂತಿದ್ದ ಹಾಸಿಗೆಯೊಂದು ಕಂಡುಬಂದಿದ್ದು, ಅನುಮಾನಗೊಂಡು ಪರಿಶೀಲಿಸಿದಾಗ ಅದರೊಳಗೆ ಮಹಿಳೆಯ ಮೃತದೇಹ ಇರುವುದು ಬೆಳಕಿಗೆ ಬಂದಿದೆ.
READ THIS : ಆಡಿ ಕಾರಲ್ಲಿ ವ್ಯಕ್ತಿಯ ಮೃತದೇಹ ಪತ್ತೆ – ಹೃದಯಾಘಾತ ಆಗಿರೋ ಶಂಕೆ!

ಮೃತದೇಹ ಕಂಡು ಮಾಲೀಕರು ಶಾಕ್
ಇನ್ನು ಮೃತದೇಹ ಕಂಡ ನಿವೇಶನದ ಮಾಲೀಕರು ಶಾಕ್ ಆಗಿದ್ದಾರೆ. ಮಹಿಳೆಯನ್ನು ಬೇರೆಡೆ ಕೊಲೆ ಮಾಡಿ, ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ವಾಹನದಲ್ಲಿ ತಂದು ಖಾಲಿ ನಿವೇಶನದಲ್ಲಿ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
Bengaluru – ಸಂಪಿಗೆಹಳ್ಳಿ ಪೊಲೀಸರು ಭೇಟಿ, ಪರಿಶೀಲನೆ
ಮಾಹಿತಿ ತಿಳಿದು ಸ್ಥಳಕ್ಕೆ ಸಂಪಿಗೆಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿವೇಶನದ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತ ಮಹಿಳೆಯ ಗುರುತು ಪತ್ತೆಹಚ್ಚಲು ಹಾಗೂ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

MUST WATCH : ತುಮಕೂರು ಜಿಲ್ಲೆ ಸಂಪೂರ್ಣ ಬರಪೀಡಿತ – ಸರ್ಕಾರದ ಜೊತೆ ಕೈಜೋಡಿಸಿ ಎಂದ PARAM




