
BREAKING : ಬೆಂಗಳೂರಲ್ಲಿ ಆಡಿ ಕಾರಲ್ಲಿ ವ್ಯಕ್ತಿಯ ಮೃತದೇಹ ಪತ್ತೆ : ಹೃದಯಾಘಾತ ಆಗಿರೋ ಶಂಕೆ!
ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಡಿ ಕಾರಿನೊಳಗೆ ವ್ಯಕ್ತಿಯೊರ್ವನ ಮೃತದೇಹ ಪತ್ತೆಯಾಗಿದೆ. ಕೋರಮಂಗಲದ ಫಾಸ್ಟ್ಫುಡ್ ಹೋಟೆಲ್ವೊಂದರ ಮುಂದೆ ನಿಂತಿದ್ದ ಕಾರಿನಲ್ಲಿ ಶವ ಪತ್ತೆಯಾಗಿದೆ.
ವ್ಯಕ್ತಿಯ ಮೃತದೇಹ ಪತ್ತೆ
ಮಾಹಿತಿಯ ಪ್ರಕಾರ, ಮಧ್ಯರಾತ್ರಿ ಸುಮಾರು 2.30ರ ವೇಳೆಗೆ ಆಡಿ ಕಾರೊಂದು ಹೋಟೆಲ್ ಬಳಿ ಬಂದು ನಿಂತಿತ್ತು. ಬೆಳಗ್ಗೆ ಹೋಟೆಲ್ ಸಿಬ್ಬಂದಿ ಬಾಗಿಲು ತೆರೆಯಲು ಬಂದಾಗ ಕಾರು ಅದೇ ಸ್ಥಳದಲ್ಲಿ ನಿಂತಿರುವುದನ್ನು ಗಮನಿಸಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿಯನ್ನು ಎಬ್ಬಿಸಲು ಸಿಬ್ಬಂದಿ ಮುಂದಾದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅನುಮಾನಗೊಂಡ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
READ THIS : ಗುಬ್ಬಿಯಲ್ಲಿ ನವಜಾತ ಶಿಶುವಿನ ಅರ್ಧಂಬರ್ಧ ಮೃತದೇಹ ಪತ್ತೆ!

ಹೃದಯಾಘಾತ ಆಗಿರೋ ಶಂಕೆ!
KA-51-MG-9786 ನೋಂದಣಿ ಸಂಖ್ಯೆಯ ಆಡಿ ಕಾರನ್ನು ಪರಿಶೀಲಿಸಿದಾಗ ಅದರೊಳಗೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಅಕ್ಬರ್ ಎಂದು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.
ಪೊಲೀಸರು ಭೇಟಿ, ಪರಿಶೀಲನೆ
ಮಾಹಿತಿ ಪಡೆದ ಕೋರಮಂಗಲ ಪೊಲೀಸರು ಹಾಗೂ ಸೊಕೊ (ಸ್ಥಳ ಪರಿಶೀಲನಾ) ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

MUST WATCH : ಡಬಲ್ ಹಣ ಕೊಡೋದಾಗಿ ಮಕ್ಮಲ್ ಟೋಪಿ – ಪೊಲೀಸರ ಖೆಡ್ಡಾಗೆ ಬಿದ್ದ ಖತರ್ನಾಕ್ ಗ್ಯಾಂಗ್




