Nelamangala : ಸರಗಳ್ಳತನ ಮಾಡುವಾಗ ಜನರಿಂದ ಪೆಟ್ಟು ತಿಂದು ಪರಾರಿಯಾಗಿದ್ದ ರೌಡಿಶೀಟರ್ ಶವವಾಗಿ ಪತ್ತೆ

ಸರಗಳ್ಳತನಕ್ಕೆ ಯತ್ನಿಸಿದ್ದ ಆರೋಪಿಯನ್ನ ಸಾರ್ವಜನಿಕರು ಹಿಡಿದು ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು. ಆದ್ರೆ ಆಸ್ಪತ್ರೆಗೆ ಸಾಗಿಸುವಾಗ ತಪ್ಪಿಸಿಕೊಂಡಿದ್ದ ಆರೋಪಿಯೊಬ್ಬ ಇದೀಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.
ಮೃತನನ್ನು ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ್ ಎಂದು ಗುರುತಿಸಲಾಗಿದೆ.
ಸರಗಳ್ಳತನ ಮಾಡುವಾಗ ಜನರಿಂದ ಪೆಟ್ಟು ತಿಂದು ಪರಾರಿ!
ಕಳೆದ ಭಾನುವಾರ ಕುಲುವನಹಳ್ಳಿ ಗೇಟ್ ಬಳಿ ಜಯಂತ್ ಹಾಗೂ ಯತೀಶ್ ಸೇರಿ ವೃದ್ದೇಯ ಮಾಂಗಲ್ಯ ಸರ ಕದಿಯಲು ಹೋಗಿ ಸಾರ್ವಜನಿಕರ ಕೈಗೆ ತಗ್ಲಾಕೊಂಡಿದ್ದು, ಸ್ಥಳೀಯರು ಇಬ್ಬರನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.. ಇನ್ನು ಹಲ್ಲೆಯಿಂದ ಇಬ್ಬರು ಪ್ರಜ್ಙೆ ತಪ್ಪುತ್ತಿದ್ದಂತೆ ಆರೋಪಿಗಳನ್ನು ಆಂಬ್ಯುಲೆನ್ಸ್ನಲ್ಲಿ ಕರೆದೊಯ್ಯುವ ವೇಳೆ ಇಬ್ಬರೂ ಪರಾರಿಯಾಗಿದ್ರಂತೆ. ಆರೋಪಿಗಳು ಪರಾರಿಯಾದ ಬಳಿಕ ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಆದ್ರೆ ನಿನ್ನೆ ಸಂಜೆ ನೆಲಮಂಗಲ ತಾಲೂಕಿನ ಗೋವೆನಹಳ್ಳಿ ಕೆರೆಯಲ್ಲಿ ಜಯಂತ್ ಶವವಾಗಿ ಪತ್ತೆಯಾಗಿದ್ರೆ, ಮತ್ತೋರ್ವ ಆರೋಪಿ ಯತೀಶ್ ನಾಪತ್ತೆಯಾಗಿದ್ದಾನೆ.
READ THIS : ತಡರಾತ್ರಿ ತಲ್ವಾರ್ ಹಿಡಿದು ರೌಡಿಶೀಟರ್ ಅಟ್ಟಹಾಸ.!

ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಹೊರಬರಲಿದೆ ಸತ್ಯಾಂಶ
ಇನ್ನು ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್, ಅಡಿಷನಲ್ ಎಸ್ಪಿ ಲಕ್ಷ್ಮೀನಾರಾಯಣ್ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಪ್ರತಿಕ್ರಿಯಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸತ್ಯಾಂಶ ಗೊತ್ತಾಗಲಿದ್ದು, ನಾವು ಯಾರ ಪರವೂ ಇಲ್ಲ, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಪ್ರಕರಣದಲ್ಲಿನ ಸತ್ಯಾಸತ್ಯತೆಗಳನ್ನು ಬಯಲಿಗೆಳೆಯುತ್ತೇವೆ ಎಂದು ತಿಳಿಸಿದ್ದಾರೆ.

ಸಾವಿಗೆ ನಿಖರ ಕಾರಣವೇನು..?
ಇನ್ನು ಪ್ರಕರಣದ ತನಿಖೆಗಾಗಿ ಅಡಿಷನಲ್ ಎಸ್ಪಿ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು,
ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ಹಾಗೂ ತ್ಯಾಮಗೊಂಡ್ಲು ಠಾಣೆಯಲ್ಲಿ ಶವ ಪತ್ತೆ ಪ್ರಕರಣ ದಾಖಲಾಗಿದೆ.
ಸದ್ಯ ಬ್ಯಾಟರಿ ಜಯಂತ್ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಸಾವಿಗೆ ನಿಖರ ಕಾರಣ ಏನು ಎಂಬುದು ಬಯಲಾಗಬೇಕಿದೆ.
MUST WATCH : ರಾಜ್ಯದಲ್ಲಿ H1N1 ಆತಂಕ ಆರೋಗ್ಯ ಸಚಿವರು ಹೇಳಿದ್ದೇನು.?





