
ನೈಸ್ ರಸ್ತೆ ಅಕ್ರಮ ಟೋಲ್ ಸಂಗ್ರಹ ವಿಚಾರ – ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ JDS ನಿಯೋಗ
ನೈಸ್ ರಸ್ತೆಯಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ JDS ನಿಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದೆ. ಜೆಡಿಎಲ್ಪಿ ನಾಯಕ ಸುರೇಶ್ ಬಾಬು ಅವರ ನೇತೃತ್ವದಲ್ಲಿ ಜೆಡಿಎಸ್ ನಿಯೋಗವು ಇಂದು ವಿಧಾನಸೌಧದಲ್ಲಿರುವ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ತೆರಳಿ ದೂರು ಸಲ್ಲಿಸಿತು.
READ THIS : ಮನೆ ಬಾಗಿಲಿಗೆ ಮನೆ ಮಗ ಕಾರ್ಯಕ್ರಮ ಅಧಿಕಾರಿಗಳಿಗೆ ಸುರೇಶ್ ಬಾಬು ಖಡಕ್ ಸೂಚನೆ

ನೈಸ್ ವಿಚಾರದಲ್ಲಿ ಹಗಲು ದರೋಡೆ ನಡೆಯುತ್ತಿದೆ
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಬಾಬು ಅವರು,ಸರ್ಕಾರ ಬಂದಾಗಿನಿಂದ ಹಲವು ನ್ಯೂನತೆಗಳನ್ನು ಎತ್ತಿ ಹಿಡಿದ್ದೇವೆ. ಅಲ್ಲದೇ ಭ್ರಷ್ಟಾಚಾರದಲ್ಲಿ ಭಾಗಿಯಾದವರನ್ನ ಮಂತ್ರಿ ಮಾಡಿರುವುದು ದುರ್ದೈವ. ಅವರನ್ನು ಇಟ್ಟುಕೊಂಡು ಸದನ ನಡೆಸಲು ಮುಂದಾಗಿದ್ದರು.

ನೈಸ್ ವಿಚಾರದಲ್ಲಿ ಹಗಲು ದರೋಡೆ ನಡೆಯುತ್ತಿದೆ. ಪ್ರಮುಖವಾಗಿ ಟೋಲ್ ಕಲೆಕ್ಷನ್ ಮಾಡುವ ಹಾಗಿಲ್ಲ ಎಂದು ಕೋರ್ಟ್ ಹೇಳಿದೆ. ಆದರೂ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಸರ್ಕಾರ ಈ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.

JDS ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು – ಸರ್ಕಾರ ಕಣ್ಣು, ಕಿವಿ ಮುಚ್ಕೊಂಡು ಕೂತಿದೆ
ಈ ಸರ್ಕಾರ ಕಣ್ಣು ಕಿವಿ ಎರಡು ಮುಚ್ಚಿಕೊಂಡು ಕುಳಿತಿದೆ. ಹೀಗಾಗಿ ಸಿಎಸ್ ಅವರನ್ನು ಭೇಟಿ ದೂರು ನೀಡಿದ್ದೇವೆ. ಸಂಜೆ ರಾಜ್ಯಪಾಲರನ್ನ ಭೇಟಿಮಾಡಲಿದ್ದೇವೆ ಅವರಿಗೂ ದೂರು ನೀಡಲಾಗುವುದು. ಇಲ್ಲಿ ಗಮನಹರಿಸದಿದ್ರೆ ಕೇಂದ್ರ ಸರ್ಕಾರದ ಮೊರೆ ಹೋಗುತ್ತೇವೆ ಎಂದರು.
MUST WATCH : ತುಮಕೂರಲ್ಲಿ ಡ್ರಾಫ್ಟ್ ಮತದಾರರ ಪಟ್ಟಿ ಪ್ರಕಟ – SIR ಕುರಿತು DC SHUBHA KALYAN ಏನಂದ್ರು ನೋಡಿ





