
ಶಿವಮೊಗ್ಗದಲ್ಲಿ ಯುವಕನ ಕಿರುಕುಳಕ್ಕೆ ಬೇಸತ್ತು Suicide ಗೆ ಯತ್ನಿಸಿದ್ದ ಬಾಲಕಿ, ಚಿಕಿತ್ಸೆ ಫಲಿಸದೇ ಸಾವು!
ಪಾಗಲ್ ಪ್ರೇಮಿಯ ಕಿರುಕುಳ ತಾಳಲಾರದೆ 17 ವರ್ಷದ ಅಪ್ರಾಪ್ತೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿಗೆ ಕಳೆದ ಒಂದು ವರ್ಷದಿಂದ ಯುವಕನೊಬ್ಬ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಕಿರುಕುಳ ತಾಳಲಾರದೇ ಅಪ್ರಾಪ್ತೆ Suicide ಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ನಡೆದಿದ್ದೇನು..?
ಮೃತ ಅಪ್ರಾಪ್ತೆಗೆ ಸಾಗರದ ಸುಮುಖ್ ಎಂಬ 19 ವರ್ಷದ ಯುವಕನೊಂದಿಗೆ ಪರಿಚಯವಾಗಿದ್ದು, ಆತ ಆಕೆಗೆ ಮೊಬೈಲ್ ಕೂಡ ಕೊಡಿಸಿದ್ದನಂತೆ. ಇನ್ನು ಈ ವಿಚಾರ ಪೋಷಕರಿಗೆ ತಿಳಿದು, ಬಳಿಕ ಮೊಬೈಲ್ ಕಸಿದುಕೊಂಡು ಬಾಲಕಿಗೆ ಬುದ್ದಿವಾದ ಹೇಳಿದ್ರಂತೆ.
READ THIS : ಮದುವೆಗೆ ಒಪ್ಪದ ಪ್ರೇಯಸಿಯ ಕತ್ತುಕೊಯ್ದು ಕೊಂದ ಪಾಗಲ್ ಪ್ರೇಮಿ!

ಬಾಲಕಿ ಚಿಕಿತ್ಸೆ ಫಲಿಸದೇ ಸಾವು!
ಇದಾದ ಮೇಲೆ ಬಾಲಕಿ ಕಾಲೇಜಿಗೆ ಹೋಗಿ ಬರುತ್ತಿದ್ದಳಂತೆ, ಆದ್ರೆ ಯುವಕ ಪ್ರತಿನಿತ್ಯ ಆಕೆಯನ್ನು ಬೈಕ್ನಲ್ಲಿ ಹಿಂಬಾಲಿಸಿ ಆಕೆಗೆ ನಿನ್ನ ಫೋಟೋ ಹಾಗೂ ವಿಡಿಯೋಗಳಿವೆ ಎಂದು ಬೆದರಿಸಿ ತನ್ನೊಂದಿಗೆ ಬರುವಂತೆ ಒತ್ತಾಯಿಸುತ್ತಿದ್ದು. ಇದ್ರಿಂದ ಬೇಸತ್ತ ಬಾಲಕಿ ಆಗಸ್ಟ್ 18ರಂದು ಸಂಜೆ ಮನೆಯಲ್ಲಿ ಕಳೆನಾಶಕ ಸೇವಿಸಿದ್ದಾಳೆ. ತಕ್ಷಣ ಕುಟುಂಬಸ್ಥರು ಅಪ್ರಾಪ್ತೆಯನ್ನು ಸಾಗರದ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಹಾಗೂ ಮಣಿಪಾಲ್ಗೆ ಕರೆದೊಯ್ದಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಪ್ರಾಪ್ತೆ ಮೃತಪಟ್ಟಿದ್ದಾಳೆ.

ಮಗಳ ಸಾವಿಗೆ ಕಾರಣರಾದ ಯುವಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಸದ್ಯ ಘಟನೆ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸುಮುಖ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಸಾಗರ ಉಪವಿಭಾಗೀಯ ಆಸ್ಪತ್ರೆ ಬಳಿ ಕುಟುಂಬಸ್ಥರು ಕಣ್ಣೀರಿಡುತ್ತಿದ್ದು, ಮಗಳ ಸಾವಿಗೆ ಕಾರಣರಾದ ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
MUST WATCH : ಲೋಕಾ ಅಧಿಕಾರಿಗಳ ದಿಢೀರ್ ಭೇಟಿ – ಸಿಬ್ಬಂದಿ ಗೈರಿಗೆ ಅಧಿಕಾರಿಗಳಿಗೆ ತರಾಟೆ





