
ಸಿನಿಮಾ ರಿಲೀಸ್ಗೂ ಮುನ್ನ ಮಂಜುನಾಥನ ದರ್ಶನ ಪಡೆದ Yash !
ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ನಾಳೆ (ಆಗಸ್ಟ್ 26) ವಿಶ್ವದಾದ್ಯಂತ ತೆರೆಕಾಣಲಿದ್ದು, ಚಿತ್ರದ ನಾಯಕ ನಟ ಯಶ್ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಮಂಜುನಾಥನ ದರ್ಶನ ಪಡೆದ ಯಶ್
ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಯಶ್, ಅಲ್ಲಿಂದ ನೇರವಾಗಿ ಧರ್ಮಸ್ಥಳ ಶ್ರೀಕ್ಷೇತ್ರಕ್ಕೆ ತೆರಳಿದರು. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಅವರು, ಗರ್ಭಗುಡಿಯ ಸಮೀಪ ಸುಮಾರು 10 ನಿಮಿಷಗಳ ಕಾಲ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು.
READ THIS : ಮೆಟ್ರೋ ರೈಲನ್ನೇ ‘ಬರ್ತ್ಡೇ ಬ್ಯಾನರ್’ ಮಾಡಿದ Yash Fans!

ಸಿನಿಮಾ ರಿಲೀಸ್ಗೂ ಮುನ್ನ ಮಂಜುನಾಥನ ದರ್ಶನ
‘ಟಾಕ್ಸಿಕ್’ ಚಿತ್ರದ ಯಶಸ್ಸಿಗಾಗಿ ಯಶ್ ವಿಶೇಷ ಪೂಜೆ ಸಲ್ಲಿಸಿದ್ದು, ಬಳಿಕ ಶ್ರೀ ಕ್ಷೇತ್ರದಲ್ಲಿ ಮಹಾ ಮಂಗಳಾರತಿಯನ್ನು ಸ್ವೀಕರಿಸಿದರು.
ಚಿತ್ರ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುವುದು ಯಶ್ ಅವರ ರೂಢಿಯಾಗಿದೆ. ತಮ್ಮ ಪ್ರತಿಯೊಂದು ಚಿತ್ರದ ಬಿಡುಗಡೆಯ ಸಂದರ್ಭದಲ್ಲೂ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿರುವ ಯಶ್, ಇದೀಗ ‘ಟಾಕ್ಸಿಕ್’ ಸಿನಿಮಾ ಯಶಸ್ವಿಯಾಗಲಿ ಎಂದು ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದಾರೆ.

ನಾಳೆ ‘ಟಾಕ್ಸಿಕ್’ ವಿಶ್ವದಾದ್ಯಂತ ತೆರೆಕಾಣುತ್ತಿರುವ ಹಿನ್ನೆಲೆಯಲ್ಲಿ ಯಶ್ ಅಭಿಮಾನಿಗಳಲ್ಲೂ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಮೂಡಿದೆ.
MUST WATCH : KPSC ಹಗರಣದಲ್ಲಿ ನೋ ಕಾಂಪ್ರಮೈಸ್ – ಉಪ್ಪು ತಿಂದವನು ನೀರು ಕುಡಿಲೇಬೇಕು.!




