
ಶಿಕಾರಿಪುರ | ಹರಿಗೆ ಗ್ರಾಮದಲ್ಲಿ ಬೀಗರೂಟ ಬ್ಯಾನ್ – ಊಟ ಹಾಕಿಸಿದ್ರೆ 1 ಲಕ್ಷ, ಊಟ ಮಾಡಿದ್ರೆ 50 ಸಾವಿರ ದಂಡ
ರಾಜ್ಯದಲ್ಲಿ ಬರದ ಪರಿಸ್ಥಿತಿಯಿಂದ ರೈತರು ಹಾಗೂ ಬಡ–ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹರಿಗೆ ಗ್ರಾಮಸ್ಥರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮದುವೆ ಬಳಿಕ ನಡೆಯುವ ಬೀಗರೂಟದಿಂದ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಎಂದು ಗ್ರಾಮದಲ್ಲಿ ಬೀಗರೂಟ ಆಯೋಜಿಸದಿರಲು ನಿರ್ಧರಿಸಿದ್ದಾರೆ
ಊಟ ಹಾಕಿಸಿದ್ರೆ ಬೀಳುತ್ತೆ ಭಾರೀ ದಂಡ!
ಇನ್ನು ಗ್ರಾಮದಲ್ಲಿ ಯಾರಾದ್ರೂ ಬೀಗರೂಟ ಆಯೋಜಿಸಿದ್ರೆ 1 ಲಕ್ಷ ರೂಪಾಯಿ ದಂಡ ವಿಧಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಊಟ ಮಾಡಿದವರಿಗೂ ಸಹ 50 ಸಾವಿರ ರೂಪಾಯಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಪ್ರತಿಷ್ಠೆಗಾಗಿ ಸಾಲ ಮಾಡಿ ದುಂದುವೆಚ್ಚ ಮಾಡುವುದನ್ನು ತಪ್ಪಿಸಿ, ಕುಟುಂಬಗಳ ಮೇಲೆ ಬೀಳುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಈ ನಿರ್ಣಯದ ಉದ್ದೇಶ ಎನ್ನಲಾಗಿದೆ.
READ THIS : ಶೀಘ್ರದಲ್ಲೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್?

ಪ್ರತಿಷ್ಠೆಗಾಗಿ ಸಾಲ ಮಾಡಿ ಬೀಗರೂಟ
ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಬಡ – ಮಧ್ಯಮ ಕುಟುಂಬಗಳು ಪ್ರತಿಷ್ಠೆಗಾಗಿ ಸಾಲ ಮಾಡಿ, ಬೀಗರೂಟ ಆಯೋಜಿಸುತ್ತಿದ್ದರು. ಇದರಿಂದ ಕುಟುಂಬಗಳು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ ಎಂಬ ಕಾರಣಕ್ಕೆ ಹರಿಗೆ ಗ್ರಾಮಸ್ಥರು ಸಂಪ್ರದಾಯಕ್ಕಿಂತ ಆರ್ಥಿಕ ಶಿಸ್ತಿಗೆ ಆದ್ಯತೆ ನೀಡಿದ್ದಾರೆ.
1 ಲಕ್ಷ ದಂಡ – ಜಿಲ್ಲೆಯಲ್ಲಿ ಹೊಸ ಚರ್ಚೆ
ಗ್ರಾಮದ ದೇವಸ್ಥಾನದಲ್ಲಿ ಸಭೆ ನಡೆಸಿದ ಗ್ರಾಮಸ್ಥರು ಚರ್ಚೆ ಬಳಿಕ ಈ ನಿರ್ಣಯ ಕೈಗೊಂಡಿದ್ದಾರೆ. ಇನ್ನು ಈ ನಿರ್ಣಯದೊಂದಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ಚರ್ಚೆ ಆರಂಭವಾಗಿದೆ.

MUST WATCH : ಪೋಸ್ಟರ್ ಅಂಟಿಸಿದವ್ರ ವಿರುದ್ಧ ಅಶ್ವಥ್ ಗರಂ ಧೈರ್ಯ ಇದ್ರೆ ನೇರವಾಗಿ ಬನ್ನಿ ಅಂತ ಸವಾಲ್




