
HALF HELMET ಬಳಕೆ, ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿದ ರಾಜ್ಯ ಸರ್ಕಾರ
ಬೈಕ್ ಸವಾರರೇ ಹುಷಾರ್.. ಹೆಲ್ಮೆಟ್ ಹಾಕಿದ್ದೀವಿ ಅಂತ ಯಾವುದೋ ಒಂದು ಸಣ್ಣ ಹಾಫ್ ಹೆಲ್ಮೆಟ್ ಹಾಕಿಕೊಂಡು ರಸ್ತೆಗೆ ಬಂದ್ರೆ ಬೀಳುತ್ತೆ ಫೈನ್. ಹೌದು.. ದ್ವಿಚಕ್ರ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಹಾಫ್ ಹೆಲ್ಮೆಟ್ಗಳ ಬಳಕೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಹೆಚ್ಚುತ್ತಿರುವ ಹಾಫ್ ಹೆಲ್ಮೆಟ್ ಬಳಕೆ
ಅಪಘಾತ ಸಂಭವಿಸಿದಾಗ ತಲೆಗೆ ಸಮರ್ಪಕ ರಕ್ಷಣೆ ನೀಡದ HALF HELMET ಗಳ ಬಳಕೆ ಹೆಚ್ಚುತ್ತಿರುವ ಬಗ್ಗೆ ಸಾರಿಗೆ ಇಲಾಖೆ ಕಳವಳ ವ್ಯಕ್ತಪಡಿಸಿದೆ.
ಹೀಗಾಗಿ ಸುರಕ್ಷತಾ ಮಾನದಂಡಕ್ಕೆ ಅನುಗುಣವಾದ ಗುಣಮಟ್ಟದ ಹೆಲ್ಮೆಟ್ಗಳನ್ನೇ ಬಳಸುವಂತೆ ಸವಾರರಿಗೆ ಸೂಚಿಸಲಾಗುತ್ತಿದೆ.
READ THIS : ಬೈಕ್ ಸವಾರರಿಗೆ ಬಿಗ್ ಅಲರ್ಟ್ – ಹಾಫ್ ಹೆಲ್ಮೆಟ್ ಸಂಪೂರ್ಣ ಬ್ಯಾನ್!

ಸಚಿವ ಬೈರತಿ ಸುರೇಶ್ ಹೇಳಿದ್ದೇನು?
ಇನ್ನು ಕ್ರಮ ಕೇವಲ ಸವಾರರಿಗೆ ಮಾತ್ರ ಸೀಮಿತವಾಗಿಲ್ಲ. ಹಾಫ್ ಹೆಲ್ಮೆಟ್ ತಯಾರಿಸುವ ಕಂಪನಿಗಳು ಹಾಗೂ ಅಂಗಡಿ–ಗೋದಾಮುಗಳಲ್ಲಿ ಅವುಗಳನ್ನು ಮಾರಾಟಕ್ಕೆ ಇಡುವವರ ವಿರುದ್ಧವೂ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ದಂಡ ಹೆಚ್ಚಿಸುವ ಬಗ್ಗೆಯೂ ಸರ್ಕಾರ ಚಿಂತನೆ
ಇದರ ಜೊತೆಗೆ ಬೆಂಗಳೂರಿನಲ್ಲಿ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ಹೆಚ್ಚಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ. ಒನ್ವೇ ಉಲ್ಲಂಘನೆ, ಫುಟ್ಪಾತ್ ಮೇಲೆ ವಾಹನ ಚಾಲನೆ, ನೋ ಪಾರ್ಕಿಂಗ್, ಸಿಗ್ನಲ್ ಜಂಪ್ ಹಾಗೂ ಅಪಾಯಕಾರಿ ಚಾಲನೆ ಸೇರಿದಂತೆ ಹಲವು ಉಲ್ಲಂಘನೆಗಳ ವಿರುದ್ಧ ಕಠಿಣ ಕ್ರಮದ ಪ್ರಸ್ತಾವನೆ ಸಲ್ಲಿಸಲಾಗಿದೆ.
ಫುಟ್ಪಾತ್ ಮೇಲೆ ಬೈಕ್ ಚಾಲನೆ ಮಾಡುವ ಸವಾರರ ಮೇಲಿನ ದಂಡ ಹೆಚ್ಚಳದ ಪ್ರಸ್ತಾವನೆ ಇನ್ನೂ ಅಂತಿಮವಾಗಿ ಜಾರಿಗೆ ಬಂದಿಲ್ಲ.
ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸದ್ಯ ಕಾನೂನು ಇಲಾಖೆಯ ಅಭಿಪ್ರಾಯ ಮತ್ತು ಸಲಹೆಗಳನ್ನು ಕೋರಲಾಗಿದ್ದು, ಕಾನೂನು ಇಲಾಖೆಯ ಒಪ್ಪಿಗೆ ಸಿಕ್ಕ ಬಳಿಕ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ.

MUST WATCH : ಎಲೆಕ್ಟ್ರಿಕ್ ಜಂಕ್ಷನ್ ಬಾಕ್ಸ್ ಸ್ಫೋಟ ಇಬ್ಬರು ಯುವಕರಿಗೆ ಗಂಭೀರ ಗಾಯ




