
ಬೈಕ್ ಸವಾರರಿಗೆ ಬಿಗ್ ಅಲರ್ಟ್! HALF HELMET ಸಂಪೂರ್ಣ ಬ್ಯಾನ್ ಮಾಡಿದ ಸರ್ಕಾರ
ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ ಹಾಫ್ ಹೆಲ್ಮೆಟ್ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಸರ್ಕಾರ ಮುಂದಾಗಿದೆ. ಅಸುರಕ್ಷಿತ ಹಾಫ್ ಹೆಲ್ಮೆಟ್ಗಳ ಉತ್ಪಾದನೆ ತಡೆಯುವ ನಿಟ್ಟಿನಲ್ಲಿ, ಇಂತಹ ಹೆಲ್ಮೆಟ್ಗಳ ತಯಾರಿಕೆಗೂ ನಿಷೇಧ ವಿಧಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಕಾರ್ಖಾನೆಗಳ ವಿರುದ್ಧ ಕ್ರಮದ ಎಚ್ಚರಿಕೆ
ಹಾಫ್ ಹೆಲ್ಮೆಟ್ ತಯಾರಿಸುವ ಕಾರ್ಖಾನೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ದ್ವಿಚಕ್ರ ವಾಹನ ಸವಾರರು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾದ ಹೆಲ್ಮೆಟ್ ಬಳಸಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
READ THIS : ದ್ವಿಚಕ್ರ ವಾಹನಗಳಲ್ಲಿ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ

ಬಸ್ ಪ್ರಯಾಣ ದರ ಏರಿಕೆ?
ಇದೇ ವೇಳೆ ರಾಜ್ಯದಲ್ಲಿ ಬಸ್ ಟಿಕೆಟ್ ದರ ಏರಿಕೆ ಮಾಡುವ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರ ನಾಲ್ಕು ಬಾರಿ ಡೀಸೆಲ್ ದರ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ. ಹೀಗಾಗಿ ದರ ಪರಿಷ್ಕರಣೆ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ.
ಈ ಸಂಬಂಧ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವರದಿ ನಾಳೆ ಅಥವಾ ನಾಡಿದ್ದು ಸಲ್ಲಿಕೆಯಾಗುವ ನಿರೀಕ್ಷೆಯಿದೆ. ವರದಿ ಬಂದ ಬಳಿಕ ಅದನ್ನು ಪರಿಶೀಲಿಸಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ದಸರಾದ ಒಳಗೆ ಆಗುತ್ತಾ ಅನ್ನೋದು ಗೊತ್ತಿಲ್ಲ. ಮೊದಲು ವರದಿ ಸಲ್ಲಿಕೆಯಾಗಲಿ. ಏನೇನಿದೆ ನೋಡಿ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

‘ಸಾರಿಗೆ ಇಲಾಖೆ ಲಾಭದ ಸಂಸ್ಥೆಯಲ್ಲ’
ಸಾರಿಗೆ ಇಲಾಖೆ ಲಾಭ ಗಳಿಸುವ ಸಂಸ್ಥೆಯಲ್ಲ, ಜನಸೇವೆ ಮಾಡುವ ಇಲಾಖೆಯಾಗಿದೆ ಎಂದು ಬೈರತಿ ಸುರೇಶ್ ಹೇಳಿದ್ದಾರೆ.
ಸರ್ಕಾರ ಸಾರಿಗೆ ವ್ಯವಸ್ಥೆಯನ್ನು ಜನಸೇವೆಯ ಉದ್ದೇಶದಿಂದ ನಡೆಸಿಕೊಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಆರ್. ಅಶೋಕ್ ಕೂಡ ಸಾರಿಗೆ ಸಚಿವರಾಗಿದ್ದರು. ಅವರ ಅವಧಿಯಲ್ಲಿ ಸಾರಿಗೆ ಇಲಾಖೆ ಎಷ್ಟು ಲಾಭ ಗಳಿಸಿತ್ತು? ವಿರೋಧ ಪಕ್ಷದವರ ರೀತಿ ಹುಚ್ಚುಚ್ಚಾಗಿ ಮಾತನಾಡಿದರೆ ಮನೆಯಲ್ಲಿರಬೇಕಾಗುತ್ತೆ ಎಂದ್ರು.

MUST WATCH : ತುಮಕೂರಲ್ಲಿ ಮಳೆರಾಯನ ಆರ್ಭಟ ತಡೆಗೋಡೆ ಕುಸಿತ.. ಕೆರೆಯಂತಾದ ಬಸ್ ನಿಲ್ದಾಣ




