
Gold Rate ದಲ್ಲಿಂದು ಕೊಂಚ ಇಳಿಕೆ – ಬೆಲೆ ಇಲ್ಲಿದೆ ನೋಡಿ
ಚಿನ್ನ ಖರೀದಿಸುವವರಿಗೆ ಕೊಂಚ ಸಮಾಧಾನಕರ ಸುದ್ದಿ ಸಿಕ್ಕಿದೆ. ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹20 ಇಳಿಕೆಯಾಗಿದ್ದು, ₹15,010ಕ್ಕೆ ತಲುಪಿದೆ. 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹22 ಇಳಿಕೆಯಾಗಿದ್ದು, ₹16,375ಕ್ಕೆ ಇಳಿದಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ
22 ಕ್ಯಾರಟ್ Gold Rate 8 ಗ್ರಾಂಗೆ ₹1,20,080, 10 ಗ್ರಾಂಗೆ ₹1,50,100 ಹಾಗೂ 100 ಗ್ರಾಂಗೆ ₹15,01,000 ಇದೆ. ಇನ್ನು 24 ಕ್ಯಾರಟ್ ಚಿನ್ನದ ಬೆಲೆ 8 ಗ್ರಾಂಗೆ ₹1,31,000, 10 ಗ್ರಾಂಗೆ ₹1,63,750 ಹಾಗೂ 100 ಗ್ರಾಂಗೆ ₹16,37,500 ಇದೆ.

READ THIS : 15,000 ಕೋಟಿ ರೂ ದಾಟಿದ ಆಭರಣ ಚಿನ್ನದ ಬೆಲೆ – ಇಲ್ಲಿದೆ ದರಪಟ್ಟಿ
ಪ್ರಮುಖ ನಗರಗಳಲ್ಲಿ ಚಿನ್ನದ ದರ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹15,010 | ₹16,375 |
| ಮುಂಬೈ | ₹15,010 | ₹16,375 |
| ದೆಹಲಿ | ₹15,010 | ₹16,375 |
| ಕೋಲ್ಕತಾ | ₹15,010 | ₹16,375 |
| ಹೈದರಾಬಾದ್ | ₹15,010 | ₹16,375 |

ಬೆಳ್ಳಿ ದರದಲ್ಲಿ ಬದಲಾವಣೆ ಇಲ್ಲ
ಚಿನ್ನದ ದರ ಇಳಿಕೆಯಾಗಿದ್ದರೂ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ ಬೆಳ್ಳಿ ಪ್ರತಿ ಗ್ರಾಂಗೆ ₹260ರಷ್ಟಿದೆ. 10 ಗ್ರಾಂ ಬೆಳ್ಳಿಗೆ ₹2,600 ಹಾಗೂ ಒಂದು ಕೆ.ಜಿ. ಬೆಳ್ಳಿಗೆ ₹2,60,000 ಪಾವತಿಸಬೇಕಾಗಿದೆ.

ಗಮನಿಸಿ: ಮೇಲಿನ ದರಗಳು ಮಾರುಕಟ್ಟೆ ದರಗಳಾಗಿದ್ದು, ಆಭರಣ ಖರೀದಿಸುವಾಗ ಮೇಕಿಂಗ್ ಚಾರ್ಜ್, ಜಿಎಸ್ಟಿ ಸೇರಿದಂತೆ ಇತರ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯಿಸಬಹುದು.
MUST WATCH : ಜೇಬಲ್ಲೇ POWER BANK BLAST – ಸ್ಫೋಟದ ರಭಸಕ್ಕೆ ವ್ಯಕ್ತಿಗೆ ಗಾಯ




