ಶಿವಮೊಗ್ಗದ ತುಂಗಾ ನದಿಗೆ ಹಾರಿ ಮಕ್ಕಳೊಂದಿಗೆ ತಾಯಿ Suicide ಗೆ ಯತ್ನ– ಇಬ್ಬರು ಮಕ್ಕಳು ಸಾವು, ತಾಯಿ ಬಚಾವ್!

ಶಿವಮೊಗ್ಗದ ತುಂಗಾ ನದಿಯಲ್ಲಿ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದು, ತಾಯಿ ಹಾಗೂ ಮತ್ತೊಂದು ಮಗು ಬದುಕುಳಿದಿದ್ದಾರೆ.
ಆಗಿದ್ದೇನು?
ಹೆಂಡತಿ ಯಾಕೆ ಹೀಗೆ ಮಾಡಿದ್ಲು ಗೊತ್ತಿಲ್ಲ ಎರಡು ಮಕ್ಕಳನ್ನು ಪತ್ತೆ ಮಾಡಿಕೊಡಿ ಅಂತ ತಂದೆ ಗೋಳಾಡಿದ್ದಾನೆ. ಬೆಳಿಗ್ಗೆ 10:00 ಗಂಟೆಗೆ ಊರು ಬಿಟ್ಟಿದ್ದಾರೆ. ನಾವ್ಯಾರು ಊರಲ್ಲಿ ಇದ್ದಿದ್ದಿಲ್ಲ ಊರು ಬಿಟ್ಟಿದ್ದು ಗೊತ್ತಿಲ್ಲ. ಆಮೇಲೆ ಒಂದು ಗಂಟೆ ಆದಮೇಲೆ ಸಂಜೆವರೆಗೂ ಹುಡುಗಾಡಿದ್ದೇವೆ.
READ THIS : ಲೇಡಿ ಸೂಪರ್ವೈಸರ್ ಕಿರುಕುಳಕ್ಕೆ ಬೇಸತ್ತು ಮಹಿಳೆ Suicide!

ನನ್ನ ಇಬ್ಬರು ಹೆಣ್ಣುಮಕ್ಕಳನ್ನು ಹುಡುಕಿಕೊಡಿ
ಘಟನೆಯಿಂದ ಆಘಾತಕ್ಕೊಳಗಾದ ಮಕ್ಕಳ ತಂದೆ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದು, “ನನ್ನ ಹೆಂಡತಿ ಯಾಕೆ ಹೀಗೆ ಮಾಡಿದಳು ಗೊತ್ತಿಲ್ಲ. ದಯವಿಟ್ಟು ನನ್ನ ಇಬ್ಬರು ಹೆಣ್ಣುಮಕ್ಕಳನ್ನು ಹುಡುಕಿಕೊಡಿ” ಎಂದಿದ್ದಾನೆ.
ಘಟನೆಗೆ ನಿಖರ ಕಾರಣವೇನು?
ಸದ್ಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತುಂಗಾ ನದಿಯಲ್ಲಿ ನಾಪತ್ತೆಯಾಗಿರುವ ಇಬ್ಬರು ಹೆಣ್ಣುಮಕ್ಕಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

MUST WATCH : ಸರ್ಕಾರದ ಹಣ ದುರ್ಬಳಕೆ ಆರೋಪ – CONGRESS ವಿರುದ್ಧ PRAHALD JOSHI ಕಿಡಿ




