ಮೈಸೂರಲ್ಲಿ ಲೇಡಿ ಸೂಪರ್ವೈಸರ್ ಕಿರುಕುಳಕ್ಕೆ ಬೇಸತ್ತು, ಡೆತ್ ನೋಟ್ ಬರೆದಿಟ್ಟು ಮಹಿಳೆ Suicide !

ಲೇಡೀಸ್ ಸೂಪರ್ವೈಸರ್ ವಿರುದ್ಧ ಕಿರುಕುಳದ ಆರೋಪ ಕೇಳಿ ಬಂದಿದ್ದು, ಡೆತ್ ನೋಟ್ ಬರೆದಿಟ್ಟು ಮಹಿಳೆಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನು ಓದಿ : ಬೆಂಗಳೂರಿನಲ್ಲಿ ಘೋರ ಘಟನೆ – ಮಗಳನ್ನು ಕೊಂದು ತಾಯಿ Suicide

ಲೇಡಿ ಸೂಪರ್ವೈಸರ್ ಕಿರುಕುಳ
Suicide ಮಾಡಿಕೊಂಡ ಮಹಿಳೆಯನ್ನು ನಾಗೇಶ್ವರಿ ಎಂದು ಗುರುತಿಸಲಾಗಿದೆ. ಅವರು ಟಾಟಾ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ನಾಲ್ಕು ತಿಂಗಳಿಂದ ವೀಕ್ ಆಫ್ ಕೊಡದೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಡಾಲಿ ಎಂಬ ಸೂಪರ್ವೈಸರ್ ವಿರುದ್ಧ ನಾಗೇಶ್ವರಿ ಡೆತ್ ನೋಟ್ನಲ್ಲಿ ಆರೋಪ ಮಾಡಿದ್ದು, “ನನ್ನದಲ್ಲದ ತಪ್ಪಿಗೆ ಟಾರ್ಗೆಟ್ ಮಾಡಿ ಕಿರುಕುಳ ನೀಡುತ್ತಿದ್ದಾರೆ” ಎಂದು ಉಲ್ಲೇಖ ಮಾಡಿದ್ದಾರೆ.
ನನ್ನ ಸಾವಿಗೆ ನ್ಯಾಯ ಕೊಡಿಸಿ
ಕೆಲಸದಿಂದ ತೆಗೆದುಹಾಕಿದ ಬಳಿಕ ನಾಗೇಶ್ವರಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಡೆತ್ ನೋಟ್ನಲ್ಲಿ ಮನವಿ ಮಾಡಿದ್ದಾರೆ.

ಇದನ್ನು ನೋಡಿ : ಪಕ್ಷ ಬಿಡಲ್ಲ, JDSಗೆ ಹೋಗಲ್ಲ – ಊಹಾಪೋಹಗಳಿಗೆ VASANNA ತೆರೆ




