ಭಾರಿ ಏರಿಕೆ ಕಂಡ Gold Rate – ಇಂದು ಹೆಚ್ಚಾಗಿದ್ದೆಷ್ಟು?

ಚಿನ್ನದ ಬೆಲೆಯ ನಾಗಾಲೋಟ ಸತತ ಎರಡನೇ ದಿನವೂ ಮುಂದುವರಿದಿದೆ. ಆಗಸ್ಟ್ 8, ಶನಿವಾರದಂದು ಬಂಗಾರದ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ ₹100 ಏರಿಕೆಯಾಗಿ ₹13,965ಕ್ಕೆ ತಲುಪಿದೆ. 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ ₹109 ಹೆಚ್ಚಾಗಿ ₹15,235ಕ್ಕೆ ಬಂದಿದೆ.
ಬೆಂಗಳೂರಿನ ಚಿನ್ನದ ದರ
ಬೆಂಗಳೂರಿನಲ್ಲಿ 22 ಕ್ಯಾರಟ್ನ 8 ಗ್ರಾಂ ಚಿನ್ನಕ್ಕೆ ₹1,11,720, 10 ಗ್ರಾಂಗೆ ₹1,39,650 ಹಾಗೂ 100 ಗ್ರಾಂಗೆ ₹13,96,500 ಪಾವತಿಸಬೇಕಾಗಿದೆ. ಇನ್ನು 24 ಕ್ಯಾರಟ್ನ 8 ಗ್ರಾಂ ಚಿನ್ನದ ಬೆಲೆ ₹1,21,880, 10 ಗ್ರಾಂಗೆ ₹1,52,350 ಹಾಗೂ 100 ಗ್ರಾಂಗೆ ₹15,23,500 ಇದೆ.

ಇದನ್ನು ಓದಿ : ಚಿನ್ನದ ಬೆಲೆ ಸತತ ಮೂರನೇ ದಿನವೂ ಏರಿಕೆ – ರೇಟ್ ಚೆಕ್ ಮಾಡಿ
ಪ್ರಮುಖ ನಗರಗಳಲ್ಲಿ Gold Rate
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹13,900 | ₹15,164 |
| ಮುಂಬೈ | ₹13,965 | ₹15,235 |
| ದೆಹಲಿ | ₹13,985 | ₹15,255 |
| ಕೋಲ್ಕತಾ | ₹13,965 | ₹15,235 |
| ಹೈದರಾಬಾದ್ | ₹13,965 | ₹15,235 |

ಚೆನ್ನೈನಲ್ಲಿ 22 ಕ್ಯಾರಟ್ ಚಿನ್ನದ ದರ ₹13,900 ಇದ್ದರೆ, 24 ಕ್ಯಾರಟ್ ಚಿನ್ನದ ದರ ₹15,164 ಇದೆ. ಮುಂಬೈ, ಕೋಲ್ಕತಾ ಹಾಗೂ ಹೈದರಾಬಾದ್ನಲ್ಲಿ 22 ಕ್ಯಾರಟ್ ಚಿನ್ನದ ದರ ₹13,965 ಮತ್ತು 24 ಕ್ಯಾರಟ್ ಚಿನ್ನದ ದರ ₹15,235 ಇದೆ. ದೆಹಲಿಯಲ್ಲಿ 22 ಕ್ಯಾರಟ್ ಚಿನ್ನ ₹13,985 ಹಾಗೂ 24 ಕ್ಯಾರಟ್ ಚಿನ್ನ ₹15,255ಕ್ಕೆ ಮಾರಾಟವಾಗುತ್ತಿದೆ.
ಬೆಳ್ಳಿ ದರದಲ್ಲಿ ಬದಲಾವಣೆ ಇಲ್ಲ
ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರೂ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ ₹245, 10 ಗ್ರಾಂಗೆ ₹2,450 ಹಾಗೂ 1 ಕೆ.ಜಿ ಬೆಳ್ಳಿಗೆ ₹2,45,000 ದರ ಇದೆ.

ಇದನ್ನು ನೋಡಿ : NICE ROAD COLLECTION ನಿಲ್ಲಿಸದಿದ್ದರೇ ಹೋರಾಟದ ಎಚ್ಚರಿಕೆ




