Tumakuru : ವಿದ್ಯುತ್ ತಂತಿಗೆ ದೋಟಿ ತಗುಲಿ ಯುವಕ ಸ್ಥಳದಲ್ಲೇ ಸಾವು

ಅಡಿಕೆ ಕೀಳಲು ತೆರಳಿದ್ದ ವೇಳೆ ವಿದ್ಯುತ್ ತಂತಿಗೆ ದೋಟಿ ತಗುಲಿ 19 ವರ್ಷದ ಯುವಕನೊಬ್ಬ ತನ್ನ ತಂದೆ ಎದುರೇ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಗ್ರಾಮಾಂತರ ತಾಲೂಕಿನ ನಾಗವಲ್ಲಿ ಸಮೀಪದ ಸೀನಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಹೆಬ್ಬೂರು ಸಮೀಪದ ಮುದಿಗೆರೆಪಾಳ್ಯದ ಮನೋಜ್ ಎಂದು ಗುರುತಿಸಲಾಗಿದೆ.
ಇದನ್ನು ಓದಿ : ಟ್ರ್ಯಾಕ್ಟರ್–ಬೈಕ್ ನಡುವೆ ಡಿಕ್ಕಿ – PC ಪರೀಕ್ಷೆ ಬರೆದು ಬರ್ತಿದ್ದ ಯುವಕ ಸಾವು
ಅಡಿಕೆ ಕೀಳುವಾಗ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು
ಇನ್ನು ಮನೋಜ್ ಅವರ ತಂದೆ ಸೀನಪ್ಪನಹಳ್ಳಿ ಗ್ರಾಮದ ಅಡಿಕೆ ತೋಟವೊಂದನ್ನು ಚೇಣಿ ಮಾಡಿಕೊಂಡು ಕೃಷಿ ಮಾಡುತ್ತಿದ್ರು. ತಂದೆಯೊಂದಿಗೆ ಮನೋಜ್ ಕೂಡ ಅಡಿಕೆ ಕೀಳಲು ತೆರಳಿದ್ದರು. ತೋಟದಲ್ಲಿ ಸ್ಟೀಲ್ ದೋಟಿಯಿಂದ ಅಡಿಕೆ ಕೀಳುತ್ತಿದ್ದ ವೇಳೆ ಮೇಲ್ಭಾಗದಲ್ಲಿದ್ದ ವಿದ್ಯುತ್ ತಂತಿಗೆ ದೋಟಿ ತಗುಲಿದೆ. ಪರಿಣಾಮ ಮನೋಜ್ಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ವಿಷಯ ತಿಳಿಯುತ್ತಿದ್ದಂತೆ ಹೆಬ್ಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಸದ್ಯ ಘಟನೆ ಸಂಬಂಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : ಅಧಿಕಾರಿಗಳಿಗೆ LAKSHMAN SAVADI ಖಡಕ್ ಸೂಚನೆ – ರೈತರಿಗೆ ತೊಂದ್ರೆ ಆಗದಂತೆ ನೋಡಿಕೊಳ್ಳಿ ಎಂದ್ರು





