Gujarat : ಪ್ರಕೃತಿಯ ವಿಚಿತ್ರ ಆಟ! 18 ಅಡಿ ಬಾವಿಯಲ್ಲಿ ಸ್ವಯಂ ಅಲೆಗಳ ಸೃಷ್ಟಿ; ವೈರಲ್ ಆದ ನಿಗೂಢ ದೃಶ್ಯ

Gujrat ನ ಮೊರ್ಬಿ ತಾಲೂಕಿನ ವಿರ್ಪರ್ದಾ ಗ್ರಾಮದಲ್ಲಿರುವ ಬಾವಿಯೊಂದರ ನೀರಿನಲ್ಲಿ ಅಲೆಯಂತಹ ಚಲನೆ ಕಂಡುಬಂದಿದೆ. ನೀರಿನ ನೈಸರ್ಗಿಕ ಚಲನೆಯು ಸ್ಥಳೀಯರಲ್ಲಿ ಕುತೂಹಲ ಹಾಗೂ ಆತಂಕವನ್ನು ಸೃಷ್ಟಿಸಿದೆ.
ಗ್ರಾಮಸ್ಥರಲ್ಲಿ ಆತಂಕ
ಗುರುವಾರ (ಆಗಸ್ಟ್ 6) ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಬಾವಿಯ ನೀರು ಯಾವುದೇ ಹೊರಗಿನ ಕಾರಣವಿಲ್ಲದೆ ಅಲೆಗಳಂತೆ ಚಲಿಸಲು ಆರಂಭಿಸಿತು. ಇದೇ ರೀತಿಯ ಘಟನೆ ಕೆಲವು ದಿನಗಳ ಹಿಂದೆಯೂ ನಡೆದಿದ್ದು, ಕೆಲಕಾಲ ನಿಂತಿದ್ದ ನೀರಿನ ಚಲನೆ ಮತ್ತೆ ಆರಂಭವಾಗಿರುವುದು ಗ್ರಾಮಸ್ಥರ ಗಮನ ಸೆಳೆದಿದೆ.
ಇದನ್ನು ಓದಿ : ಮನೆಯ ಬಾತ್ರೂಂನಲ್ಲಿ 7 ಅಡಿ ಉದ್ದದ ಮೊಸಳೆ ಪತ್ತೆ!

ವಿಸ್ತೃತ ವರದಿಗೆ ಡಿಸಿ ಆದೇಶ
ಬಾವಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳ ಆಧಾರದ ಮೇಲೆ, ಜಿಲ್ಲಾ ಭೂವಿಜ್ಞಾನಿಗಳ ತಂಡ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಾಥಮಿಕ ಪರಿಶೀಲನೆಯ ಪ್ರಕಾರ, ಬಾವಿಯ ಅಡಿಭಾಗದಲ್ಲಿ ಸಿಲುಕಿಕೊಂಡಿರುವ ಗಾಳಿಯ ಒತ್ತಡ ಅಥವಾ ಭೂಗತ ಚಟುವಟಿಕೆಗಳಿಂದ ನೀರಿನಲ್ಲಿ ಈ ರೀತಿಯ ಚಲನೆ ಉಂಟಾಗಿರಬಹುದು ಎಂದು ಭೂವಿಜ್ಞಾನಿಗಳು ಅಂದಾಜಿಸಿದ್ದಾರೆ.
ಈ ಕುರಿತು ಭೂಗತ ಜಲ ಸಂಶೋಧನಾ ತಂಡದಿಂದ ವಿಸ್ತೃತ ವರದಿಯನ್ನು ಪಡೆಯಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಇನ್ನು ವರದಿ ಬಂದ ಬಳಿಕ ನೀರಿನ ಚಲನೆಗೆ ನಿಖರ ಕಾರಣ ತಿಳಿಯುವ ಸಾಧ್ಯತೆಯಿದೆ.

ಇದನ್ನು ನೋಡಿ : ಭಾರೀ ಮಳೆಗೆ ಮತ್ತೆ ಗುಡ್ಡ ಕುಸಿತ – ಹೆದ್ದಾರಿಗೆ ಉರುಳಿದ ಬೃಹತ್ ಬಂಡೆ-ಮಣ್ಣು




