ರಾತ್ರಿ ಬಾತ್ರೂಮ್ ಬಾಗಿಲು ತೆಗೆದವನಿಗೆ ಶಾಕ್! ಮನೆಯ ಬಾತ್ರೂಂನಲ್ಲಿ 7 ಅಡಿ ಉದ್ದದ ಮೊಸಳೆ ಪತ್ತೆ!

ಗುಜರಾತ್ನ ಆನಂದ್ ಜಿಲ್ಲೆಯಲ್ಲಿ ಮನೆಯ ಸ್ನಾನಗೃಹದಲ್ಲಿ ಸುಮಾರು 7 ಅಡಿ ಉದ್ದದ ಮೊಸಳೆ ಪತ್ತೆಯಾಗಿದ್ದು, ನಿದ್ರಿಸುತ್ತಿದ್ದ ಕುಟುಂಬ ಬೆಚ್ಚಿಬಿದ್ದ ಘಟನೆ ನಡೆದಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳು ವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಘಟನೆಗಳ ನಡುವೆ ಈ ಪ್ರಕರಣ ಗಮನ ಸೆಳೆದಿದೆ.
ರಾತ್ರಿ ಬಾತ್ರೂಮ್ ಬಾಗಿಲು ತೆಗೆದವನಿಗೆ ಶಾಕ್!
ಮೊಸಳೆ ಬಾಲಾಭಾಯಿ ಚೌಹಾಣ್ ಎಂಬುವವರ ಮನೆಯ ಸ್ನಾನಗೃಹಕ್ಕೆ ನುಗ್ಗಿತ್ತು. ಮನೆಯ ಹೊರಭಾಗದಲ್ಲಿ ನಾಯಿಗಳು ನಿರಂತರವಾಗಿ ಬೊಗಳುತ್ತಿದ್ದರಿಂದ ಎಚ್ಚರಗೊಂಡ ಕುಟುಂಬ ಸದಸ್ಯರು ಪರಿಶೀಲಿಸಿದಾಗ, ಬಾತ್ರೂಂನಲ್ಲಿ ಮೊಸಳೆ ಇರುವುದನ್ನು ಕಂಡು ಆತಂಕಕ್ಕೊಳಗಾದರು. ತಕ್ಷಣವೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಇದನ್ನು ಓದಿ : ಜುಲೈನಲ್ಲಿ 2.11 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹ

ಒಂದು ಗಂಟೆ ಕಾರ್ಯಾಚರಣೆ
ಅರಣ್ಯ ರಕ್ಷಕರಾದ ನೀಲೇಶ್ ಭಾರ್ವಾಡ್ ಮತ್ತು ಮನೀಶ್ ಪ್ರಜಾಪತಿ ಅವರ ನೇತೃತ್ವದಲ್ಲಿ, ದಯಾ ಫೌಂಡೇಶನ್ ಅಧ್ಯಕ್ಷ ನಿತೇಶ್ ಚೌಹಾಣ್ ಹಾಗೂ ಸ್ವಯಂಸೇವಕ ತುಷಾರ್ ರಾಣಾ ಅವರ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ಮೊಸಳೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಯಿತು
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯಲ್ಲಿ, ಮೊಸಳೆಗೆ ಯಾವುದೇ ಗಾಯವಾಗದಂತೆ ಹಾಗೂ ಸ್ಥಳೀಯ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಮೊಸಳೆಯನ್ನು ಸಮೀಪದ ಕೊಳಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

ಇದನ್ನು ನೋಡಿ : SIDDARAMAIAH ಚುನಾವಣಾ ನಿವೃತ್ತಿ ಬಗ್ಗೆ ಮಗ YATHINDRA SIDDARAMAIAH ಶಾಕಿಂಗ್ ಹೇಳಿಕೆ




