ಆರೋಪಿ Darshan ಶಾಕ್ ಮೇಲೆ ಶಾಕ್ : ಮತ್ತೆ ಇಬ್ಬರು ಆರೋಪಿಗಳಿಂದ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಕೆ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ Darshan ಹಾಗೂ ಅವರ ಗ್ಯಾಂಗ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣದ ಎ-14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ, ಮತ್ತಿಬ್ಬರು ಆರೋಪಿಗಳು ಕೂಡ ಮಾಫಿ ಸಾಕ್ಷಿಯಾಗಲು ಮುಂದಾಗಿದ್ದಾರೆ.
ದರ್ಶನ್ ಗ್ಯಾಂಗ್ಗೆ ಮಾಫಿ ಸಾಕ್ಷಿ ಶಾಕ್
ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರದೋಷ್ ಅರ್ಜಿಯ ವಿಚಾರಣೆ ನಡೆಯಿತು. ಇದೇ ವೇಳೆ ಪ್ರಕರಣದ ಎ-8 ಆರೋಪಿ ರವಿಶಂಕರ್ ಹಾಗೂ ಎ-10 ಆರೋಪಿ ವಿನಯ್ ಪರ ವಕೀಲರು ತಮ್ಮ ಕಕ್ಷಿದಾರರನ್ನೂ ಮಾಫಿ ಸಾಕ್ಷಿಗಳಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಮಧ್ಯಾಹ್ನ ಪ್ರತ್ಯೇಕ ಅರ್ಜಿ ಸಲ್ಲಿಸುವುದಾಗಿ ವಕೀಲರು ತಿಳಿಸಿದ್ದಾರೆ. ರವಿಶಂಕರ್ ಮತ್ತು ವಿನಯ್ ಇಬ್ಬರೂ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.
ಇದನ್ನು ಓದಿ : Darshan ಗೆ ಸಂಕಷ್ಟ – ಮಾಫಿ ಸಾಕ್ಷಿ ಆಗಲು ಎ-14 ಪ್ರದೋಷ್ ಅರ್ಜಿ

ಪ್ರದೋಷ್ ಪರ ವಕೀಲರಿಂದ ಆಕ್ಷೇಪ
ಮತ್ತಿಬ್ಬರು ಆರೋಪಿಗಳ ಅರ್ಜಿಯನ್ನು ತಮ್ಮ ಅರ್ಜಿಯೊಂದಿಗೆ ಸೇರಿಸಬಾರದು ಎಂದು ಎ-14 ಆರೋಪಿ ಪ್ರದೋಷ್ ಪರ ವಕೀಲ ದಿವಾಕರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಮೊದಲು ಪ್ರದೋಷ್ ಅವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಳ್ಳಬೇಕು. ಬಳಿಕ ಪ್ರಾಸಿಕ್ಯೂಷನ್ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಅವರು ವಾದಿಸಿದ್ದಾರೆ. ಎರಡೂ ಕಡೆಗಳ ವಾದಗಳನ್ನು ಆಲಿಸಿದ 59ನೇ ಸೆಷನ್ಸ್ ನ್ಯಾಯಾಲಯವು ವಿಚಾರಣೆಯನ್ನು ಕೆಲಕಾಲ ಮುಂದೂಡಿದೆ.
ಪ್ರತ್ಯೇಕ ಕೊಠಡಿಯಲ್ಲಿ ವಿಚಾರಣೆಗೆ ಮನವಿ
ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಯಲ್ಲಿ ಪ್ರದೋಷ್ ಪರ ವಕೀಲರು ಮತ್ತೊಂದು ಮನವಿಯನ್ನೂ ಮಾಡಿದ್ದಾರೆ.
ದರ್ಶನ್ ಇರುವ ಕೊಠಡಿಯಿಂದ ಪ್ರತ್ಯೇಕವಾಗಿ ಪ್ರದೋಷ್ ಅವರನ್ನು ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸುವಂತೆ ಕೋರಿದ್ದಾರೆ.
ದರ್ಶನ್ ಬೆದರಿಕೆ ಹಾಕುವುದು ಅಥವಾ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಈ ಮನವಿ ಸಲ್ಲಿಕೆಯಾಗಿದೆ.

ಇದನ್ನು ನೋಡಿ : ಸದ್ಯಕ್ಕೆ ರಾಜೀನಾಮೆ ಕೊಡಲ್ಲ ಎಂದ VASANNA – CM ಕರೆ ಬಳಿಕ ಯೂಟರ್ನ್ ಹೊಡೆದಿದ್ದು ಯಾಕೆ?




