Kieron Pollard ವಿಶ್ವದಾಖಲೆ ಮುರಿದ ಜಾಸ್ ಬಟ್ಲರ್

ಇಂಗ್ಲೆಂಡ್ನ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಬಟ್ಲರ್ ದಾಖಲೆ ಪುಸ್ತಕ ಸೇರಿದ್ದಾರೆ.
Kieron Pollard ವಿಶ್ವದಾಖಲೆ ಮುರಿದ ಬಟ್ಲರ್
ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಮತ್ತು ವೆಲ್ಷ್ ಫೈರ್ ನಡುವಿನ ಪುರುಷರ ಹಂಡ್ರೆಡ್ ಪಂದ್ಯದಲ್ಲಿ ಬಟ್ಲರ್ ಕೇವಲ 20 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದರು.
ಈ ಇನ್ನಿಂಗ್ಸ್ ವೇಳೆ ಅವರು ವೆಸ್ಟ್ ಇಂಡೀಸ್ನ Kieron Pollard ಅವರ ಹೆಸರಿನಲ್ಲಿದ್ದ ಟಿ20 ಕ್ರಿಕೆಟ್ನ ಗರಿಷ್ಠ ರನ್ ದಾಖಲೆಯನ್ನು ಮುರಿದರು.

492 ಇನ್ನಿಂಗ್ಸ್ಗಳಲ್ಲಿ 14,833 ರನ್
156 ರನ್ಗಳ ಗುರಿ ಬೆನ್ನಟ್ಟುತ್ತಿದ್ದ ಮ್ಯಾಂಚೆಸ್ಟರ್ ತಂಡದ ಪರ 62ನೇ ಎಸೆತದಲ್ಲಿ ಬಟ್ಲರ್ ಈ ಐತಿಹಾಸಿಕ ಸಾಧನೆ ಮಾಡಿದರು. ಇದು ಅವರ 522ನೇ ಟಿ20 ಪಂದ್ಯವಾಗಿದ್ದು, 492 ಇನ್ನಿಂಗ್ಸ್ಗಳಲ್ಲಿ ಒಟ್ಟು 14,833 ರನ್ ಗಳಿಸಿದ್ದಾರೆ.
ಈ ಹಿಂದೆ ದಾಖಲೆ ಹೊಂದಿದ್ದ ಕೀರನ್ ಪೊಲಾರ್ಡ್ 746 ಟಿ20 ಪಂದ್ಯಗಳ 663 ಇನ್ನಿಂಗ್ಸ್ಗಳಲ್ಲಿ 14,803 ರನ್ ಗಳಿಸಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಪೊಲಾರ್ಡ್ ಈ ವರ್ಷದ ಆರಂಭದಲ್ಲಿ ಕ್ರಿಸ್ ಗೇಲ್ ಅವರ ದೀರ್ಘಕಾಲದ ದಾಖಲೆಯನ್ನು ಹಿಂದಿಕ್ಕಿದ್ದರು.
ಇದನ್ನು ಓದಿ : ಬೌಂಡರಿಗಳ ಮೂಲಕವೇ ದಾಖಲೆಯೆತ್ತಿದ ಇಂಗ್ಲೆಂಡ್ ನಾಯಕ

ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು:
- ಜೋಸ್ ಬಟ್ಲರ್ – 14,833* ರನ್
- ಕೀರನ್ ಪೊಲಾರ್ಡ್ – 14,803 ರನ್
- ಕ್ರಿಸ್ ಗೇಲ್ – 14,562 ರನ್
- ಅಲೆಕ್ಸ್ ಹೇಲ್ಸ್ – 14,449 ರನ್
- ಡೇವಿಡ್ ವಾರ್ನರ್ – 14,284 ರನ್
2022ರಲ್ಲಿ ಇಂಗ್ಲೆಂಡ್ ತಂಡವನ್ನು ಐಸಿಸಿ ಪುರುಷರ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೆ ಮುನ್ನಡೆಸಿದ್ದ ಬಟ್ಲರ್, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 160 ಪಂದ್ಯಗಳಿಂದ 4,212 ರನ್ ಗಳಿಸಿದ್ದಾರೆ.
ಐಪಿಎಲ್ನಲ್ಲಿಯೂ ತಮ್ಮ ಛಾಪು ಮೂಡಿಸಿರುವ ಬಟ್ಲರ್, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್ನಲ್ಲಿ ಅವರು 7 ಶತಕ ಹಾಗೂ 28 ಅರ್ಧಶತಕಗಳ ನೆರವಿನಿಂದ 4,646 ರನ್ ಗಳಿಸಿದ್ದಾರೆ.

ಇದನ್ನು ನೋಡಿ : ಕೃಷ್ಣಾ ನದಿಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷ – ಮೊಸಳೆ ಕಂಡು ಜನರಲ್ಲಿ ಹೆಚ್ಚಿದ ಆತಂಕ




