
ವಿಶ್ವ ದಾಖಲೆಯನ್ನೇ ಉಡೀಸ್ ಮಾಡಿದ Smriti Mandhan !
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟಿ20ಐ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಮಂಧಾನ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ನ್ಯೂಝಿಲೆಂಡ್ನ ಸುಝಿ ಬೇಟ್ಸ್ ಹೆಸರಲಿತ್ತು
ಬಾಂಗ್ಲಾದೇಶ ವಿರುದ್ಧ ನಡೆದ ಏಷ್ಯನ್ ಗೇಮ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ 19 ಎಸೆತಗಳಲ್ಲಿ 37 ರನ್ ಗಳಿಸಿದರು. ಈ ಇನಿಂಗ್ಸ್ನೊಂದಿಗೆ ಅವರ ಟಿ20 ಅಂತಾರಾಷ್ಟ್ರೀಯ ರನ್ಗಳ ಸಂಖ್ಯೆ 4,765ಕ್ಕೆ ಏರಿಕೆಯಾಯಿತು. ಇದಕ್ಕೂ ಮುನ್ನ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನ್ಯೂಜಿಲೆಂಡ್ನ ಸುಝಿ ಬೇಟ್ಸ್ ಅವರ ಹೆಸರಿನಲ್ಲಿತ್ತು. ನ್ಯೂಜಿಲೆಂಡ್ ಪರ 178 ಇನಿಂಗ್ಸ್ಗಳಲ್ಲಿ ಬೇಟ್ಸ್ 4,758 ರನ್ ಗಳಿಸಿದ್ದರು.
READ THIS : ಲಾರ್ಡ್ಸ್ ಮೈದಾನದಲ್ಲಿ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧಾನ

ವಿಶ್ವ ದಾಖಲೆಯನ್ನೇ ಉಡೀಸ್!
ಇದೀಗ 171 ಇನಿಂಗ್ಸ್ಗಳಲ್ಲಿ 4,765 ರನ್ ಗಳಿಸಿರುವ ಸ್ಮೃತಿ ಮಂಧಾನ, ಸುಝಿ ಬೇಟ್ಸ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
5,000 ರನ್ಗಳ ಮೈಲಿಗಲ್ಲಿನತ್ತ Smriti Mandhan
ವಿಶ್ವ ದಾಖಲೆ ನಿರ್ಮಿಸಿರುವ ಸ್ಮೃತಿ ಮಂಧಾನ ಇದೀಗ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇನ್ನೂ 235 ರನ್ ಗಳಿಸಿದರೆ, 5,000 ರನ್ಗಳ ಗಡಿ ದಾಟಲಿದ್ದಾರೆ.

ಮುಂದಿನ ಸರಣಿ ಹಾಗೂ ಟೂರ್ನಿಗಳಲ್ಲಿ ಮಂಧಾನ ಈ ಮೈಲಿಗಲ್ಲು ತಲುಪಿದರೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 5,000 ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ನಿರ್ಮಾಣವಾಗಲಿದೆ.
MUST WATCH : ಕರ್ನಾಟಕ ಬಿಟ್ಟು ತೊಲಗ್ರೋ ನನ್ ಮಕ್ಳ – ಕಾಂಗ್ರೆಸ್ ವಿರುದ್ದ SURESH GOWDA ರೋಷಾವೇಶ





