Smriti Mandhana : ಮೊದಲ ಮಹಿಳಾ ಟೆಸ್ಟ್ ಪಂದ್ಯ: ಲಾರ್ಡ್ಸ್ ನಲ್ಲಿ ಅಪರೂಪದ ದಾಖಲೆ ಬರೆದ ಸ್ಮೃತಿ ಮಂಧಾನಾ! ಆಕರ್ಷಕ ಅರ್ಧಶತಕ

ಕ್ರಿಕೆಟ್ನ ಕಾಶಿ ಎಂದೇ ಖ್ಯಾತಿ ಪಡೆದಿರುವ ಇಂಗ್ಲೆಂಡ್ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 300 ಪಂದ್ಯಗಳ ಮೈಲಿಗಲ್ಲು ತಲುಪುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.

300ನೇ ಪಂದ್ಯವನ್ನಾಡುವ ಮೂಲಕ ಇತಿಹಾಸ
ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಸ್ಮೃತಿ ಮಂಧಾನ ಪಾಲಿಗೆ ವಿಶೇಷವಾಗಿತ್ತು. ಪಂದ್ಯಕ್ಕೂ ಮುನ್ನವೇ ಟಾಸ್ ಗೆದ್ದ ಇಂಗ್ಲೆಂಡ್ ನಾಯಕಿ ನ್ಯಾಟ್ ಸೀವರ್ ಬ್ರಂಟ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಬ್ಯಾಟಿಂಗ್ಗೆ ಕ್ರೀಸ್ಗಿಳಿದ ಸ್ಮೃತಿ ಮಂಧಾನ ಅಂತಾರಾಷ್ಟ್ರೀಯ ಕ್ರಿಕೆಟ್ನ 300ನೇ ಪಂದ್ಯವನ್ನಾಡುವ ಮೂಲಕ ಇತಿಹಾಸ ನಿರ್ಮಿಸಿದರು.
ಇದನ್ನು ಓದಿ : ತನ್ನದೇ ವರ್ಲ್ಡ್ ರೆಕಾರ್ಡ್ ಮುರಿದ ಸ್ಮೃತಿ ಮಂಧಾನ

Smriti Mandhana – ವಿಶ್ವ ದಾಖಲೆ ಬರೆದ ಸ್ಮೃತಿ ಮಂಧಾನ
ಈ ಸಾಧನೆಯೊಂದಿಗೆ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ 300 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ವಿಶ್ವ ದಾಖಲೆಯನ್ನು ಸ್ಮೃತಿ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ದಕ್ಷಿಣ ಆಫ್ರಿಕಾದ ಸುನೆ ಲೂಸ್ ಅವರ ಹೆಸರಿನಲ್ಲಿತ್ತು. ಅವರು 30 ವರ್ಷ 163 ದಿನಗಳ ವಯಸ್ಸಿನಲ್ಲಿ 300ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಇದೀಗ ಸ್ಮೃತಿ ಮಂಧಾನ ಕೇವಲ 29 ವರ್ಷ 357 ದಿನಗಳಲ್ಲೇ ಈ ಸಾಧನೆ ಮಾಡುವ ಮೂಲಕ ಆ ದಾಖಲೆಯನ್ನು ಮುರಿದಿದ್ದಾರೆ.

ಇದನ್ನು ನೋಡಿ : ಕೋರ್ಟ್ ಅಂಗಳ ತಲುಪಿದ ಹೇಮಾವತಿ ಹೋರಾಟ ಹೋರಾಟಗಾರರ ಹೋರಾಟ ಹೇಗಿರುತ್ತೆ ಗೊತ್ತಾ?




