ಅಮ್ಮ, ಅಜ್ಜಿ ಮಾವನನ್ನು ಕೊಚ್ಚಿ ಕೊಂದು ಯುವಕ ಸೂಸೈಡ್ : ತ್ರಿಬಲ್ Murder ಗೆ ಬೆಚ್ಚಿ ಬಿದ್ದ ಬೆಂಗಳೂರು ಜನತೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಚ್ಚಿಬೀಳಿಸುವ ತ್ರಿಬಲ್ ಮರ್ಡರ್ ಪ್ರಕರಣ ವೊಂದು ಬೆಳಕಿಗೆ ಬಂದಿದೆ. ತಾಯಿ, ಅಜ್ಜಿ ಹಾಗೂ ಬಾವನನ್ನು ಬರ್ಬರವಾಗಿ ಹತ್ಯೆಗೈದ ಯುವಕ, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನು ಈ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ನಡೆದಿದೆ.
ತ್ರಿಬಲ್ Murder ಗೆ ಬೆಚ್ಚಿ ಬಿದ್ದ ಬೆಂಗಳೂರು
ಬೆಂಗಳೂರು ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಭೀಕರ Murder ಪ್ರಕರಣದ ಬೆನ್ನಲ್ಲೇ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.
ಕೊಟ್ಟಿಗೆಪಾಳ್ಯದಲ್ಲಿ 34 ವರ್ಷದ ಪ್ರಶಾಂತ್ ಎಂಬಾತ ತನ್ನ ಸ್ವಂತ ತಾಯಿ ಮಂಗಳಮ್ಮ, ಅಜ್ಜಿ ನಂಜಮ್ಮ ಹಾಗೂ ಬಾವ ಸತೀಶ್ ಅವರನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ಮನೆಯೊಳಗಿನ ಕೊಠಡಿಯಲ್ಲಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನು ಓದಿ : ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರ ಬರ್ಬರ Murder – ಆಗಿದ್ದೇನು?

ತಂದೆ ಪ್ರಾಣಾಪಾಯದಿಂದ ಪಾರು
ಅವಿವಾಹಿತನಾಗಿದ್ದ ಆರೋಪಿ ಪ್ರಶಾಂತ್ ತನ್ನ ತಂದೆ, ತಾಯಿ, ಅಜ್ಜಿ ಹಾಗೂ ಬಾವನೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದ.
ತಾಯಿ ಮಂಗಳಮ್ಮ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರೆ, ಅಜ್ಜಿ ಪೌರಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದರು.
ಇನ್ನು ಇವರ ಜೊತೆಯಲ್ಲೇ ಇದ್ದ ಬಾವ ಸತೀಶ್ ಕೂಡ ಅವಿವಾಹಿತನಾಗಿದ್ದು, ಪ್ಲಂಬರ್ ಕೆಲಸ ಮಾಡಿಕೊಂಡಿದ್ದರು. ಸದ್ಯಕ್ಕೆ ತಂದೆ ಚಿಕ್ಕಣ್ಣ ಮಾತ್ರ ಈ ಭೀಕರ ಘಟನೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Murder – ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹ
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ಅವರು, ಘಟನೆ ನಡೆದ ವೇಳೆ ಪ್ರಶಾಂತ್ ತಂದೆ ಚಿಕ್ಕಣ್ಣ ಮನೆಯಲ್ಲಿ ಇರಲಿಲ್ಲ. ಮನೆಯಿಂದ ಕಿರುಚಾಟ ಕೇಳಿ ಧಾವಿಸಿದ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆರೋಪಿ ಪ್ರಶಾಂತ್ನನ್ನು ಹಿಡಿದು ಮನೆಯ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದು, ಆತ ರೂಮಿನೊಳಗೆ ಲಾಕ್ ಆಗಿದ್ದ ಪ್ರಶಾಂತ್ ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಪ್ರಶಾಂತ್ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನು ನೋಡಿ : ಏತ ನೀರಾವರಿಗಾಗಿ ಬೀದಿಗಿಳಿದ ಅನ್ನದಾತರು – ಕೆರೆಗಳಿಗೆ ನೀರು ಹರಿಸುವಂತೆ ಪಟ್ಟು




