ವೀಕೆಂಡ್ ಶಾಪಿಂಗ್ ಮಾಡೋರಿಗೆ ಗುಡ್ನ್ಯೂಸ್; Gold Rate ಯಲ್ಲಿ ಭಾರಿ ಇಳಿಕೆ

ನೆನ್ನೆ ಏರಿಕೆಯಾಗಿದ್ದ ಚಿನ್ನದ ದರ ಶನಿವಾರ (ಜುಲೈ 11, 2026) ಇಳಿಕೆಯಾಗಿದೆ. ಇದರಿಂದ ವೀಕೆಂಡ್ನಲ್ಲಿ ಚಿನ್ನ ಖರೀದಿಸಲು ಯೋಜನೆ ಮಾಡಿಕೊಂಡಿದ್ದವರಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಪ್ರತಿ ಗ್ರಾಂಗೆ ₹45 ಇಳಿಕೆಯಾಗಿದ್ದು, ₹13,230ಕ್ಕೆ ತಲುಪಿದೆ. 24 ಕ್ಯಾರಟ್ ಚಿನ್ನದ ಪ್ರತಿ ಗ್ರಾಂಗೆ ₹49 ಕಡಿಮೆಯಾಗಿ ₹14,433ಕ್ಕೆ ಇಳಿದಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ
22 ಕ್ಯಾರಟ್ ಚಿನ್ನದ ಬೆಲೆ:
- 1 ಗ್ರಾಂ – ₹13,230
- 8 ಗ್ರಾಂ – ₹1,05,840
- 10 ಗ್ರಾಂ – ₹1,32,300
- 100 ಗ್ರಾಂ – ₹13,23,000

24 ಕ್ಯಾರಟ್ ಚಿನ್ನದ ಬೆಲೆ:
- 1 ಗ್ರಾಂ – ₹14,433
- 8 ಗ್ರಾಂ – ₹1,15,464
- 10 ಗ್ರಾಂ – ₹1,44,330
- 100 ಗ್ರಾಂ – ₹14,43,300
ಪ್ರಮುಖ ನಗರಗಳಲ್ಲಿನ Gold Rate (ಪ್ರತಿ ಗ್ರಾಂ)
| ನಗರ | 22 ಕ್ಯಾರಟ್ | 24 ಕ್ಯಾರಟ್ |
|---|---|---|
| ಚೆನ್ನೈ | ₹13,300 | ₹14,509 |
| ಮುಂಬೈ | ₹13,230 | ₹14,433 |
| ದೆಹಲಿ | ₹13,245 | ₹14,448 |
| ಕೋಲ್ಕತ್ತಾ | ₹13,230 | ₹14,433 |
| ಹೈದರಾಬಾದ್ | ₹13,230 | ₹14,433 |

ಇದನ್ನು ಓದಿ : ಚಿನ್ನ,ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ! ಎಷ್ಟಿದೆ ರೇಟ್
ಬೆಳ್ಳಿ ದರವೂ ಇಳಿಕೆ
ಚಿನ್ನದ ಜೊತೆಗೆ ಬೆಳ್ಳಿ ದರದಲ್ಲೂ ಇಳಿಕೆ ದಾಖಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಬೆಳ್ಳಿಯ ಬೆಲೆ ₹5 ಇಳಿಕೆಯಾಗಿದ್ದು, ₹235ಕ್ಕೆ ತಲುಪಿದೆ. 10 ಗ್ರಾಂ ಬೆಳ್ಳಿ ₹2,350 ಹಾಗೂ 1 ಕೆಜಿ ಬೆಳ್ಳಿ ₹2,35,000ಕ್ಕೆ ಮಾರಾಟವಾಗುತ್ತಿದೆ.
Gold Rate ಇನ್ನಷ್ಟು ಇಳಿಕೆಯಾಗುತ್ತದೆಯೇ?
ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳು, ಡಾಲರ್ ಮೌಲ್ಯ, ಅಂತರರಾಷ್ಟ್ರೀಯ ಚಿನ್ನದ ಬೇಡಿಕೆ ಹಾಗೂ ಕೇಂದ್ರ ಬ್ಯಾಂಕ್ಗಳ ಹಣಕಾಸು ನೀತಿಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ Gold Rate ನಲ್ಲಿ ಏರಿಳಿತ ಮುಂದುವರಿಯುವ ಸಾಧ್ಯತೆ ಇದೆ. ಹೂಡಿಕೆ ಅಥವಾ ಆಭರಣ ಖರೀದಿಗೆ ಮುಂದಾಗುವವರು ಪ್ರತಿದಿನದ ದರವನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.

ಇದನ್ನು ನೋಡಿ : ಈ ಬಾರಿ ದಸರಾ ವಿಜೃಂಭಣೆಯಿಂದ ಆಚರಿಸಬೇಕು! ಸಭೆಯಲ್ಲಿ DCM ಪರಮೇಶ್ವರ್ ಏನಂದಿದ್ರು ಗೊತ್ತಾ




