Ramayana ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ: ಯಶ್, ರಣಬೀರ್ ಚಿತ್ರದ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ!

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಅದ್ಧೂರಿ ಸಿನಿಮಾದ ಟ್ರೇಲರ್ ಜುಲೈ 24ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಟೀಸರ್ಗೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್
ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ Ramayana ಸಿನಿಮಾ ಇದೀಗ ಮತ್ತೊಂದು ಅಪ್ಡೇಟ್ ಮೂಲಕ ಸದ್ದು ಮಾಡುತ್ತಿದೆ. ಕಳೆದ ಏಪ್ರಿಲ್ 2ರಂದು ಬಿಡುಗಡೆಯಾಗಿದ್ದ ಟೀಸರ್ನಲ್ಲಿ ಮೊದಲ ಬಾರಿಗೆ ರಣಬೀರ್ ಕಪೂರ್ ಅವರನ್ನು ಶ್ರೀರಾಮನ ಪಾತ್ರದಲ್ಲಿ ಪರಿಚಯಿಸಲಾಗಿತ್ತು. ಅದ್ಧೂರಿ ದೃಶ್ಯ ವೈಭವ ಹೊಂದಿದ್ದ ಟೀಸರ್ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು.
ಇದೀಗ ಬಿಡುಗಡೆಯಾಗಲಿರುವ ಟ್ರೇಲರ್ನಲ್ಲಿ ಸಿನಿಮಾದ ಪ್ರಮುಖ ಪಾತ್ರಗಳ ಝಲಕ್ ಹಾಗೂ ಮಹಾಕಾವ್ಯವನ್ನು ಬೆಳ್ಳಿತೆರೆಗೆ ತರುವ ಚಿತ್ರತಂಡದ ಪ್ರಯತ್ನದ ಸಂಪೂರ್ಣ ಪರಿಚಯ ಸಿಗುವ ನಿರೀಕ್ಷೆ ಇದೆ.
ಇದನ್ನು ಓದಿ : ಸಲ್ಮಾನ್ ಖಾನ್, ರಣಬೀರ್ ಕಪೂರ್ ಹಿಂದಿಕ್ಕಿದ ರಿಷಬ್ ಶೆಟ್ಟಿ

ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್
ಭಾರತೀಯ ಚಿತ್ರರಂಗದ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಲಂಕಾಧಿಪತಿ ರಾವಣನಾಗಿ ಅಬ್ಬರಿಸಲಿದ್ದಾರೆ.
ಅತ್ಯಾಧುನಿಕ VFX ಬಳಸಿ ತೆರೆಗೆ
ರಾಮಾಯಣ ಮಹಾಕಾವ್ಯವನ್ನು ಆಧುನಿಕ ತಂತ್ರಜ್ಞಾನ ಹಾಗೂ ಅತ್ಯಾಧುನಿಕ VFX ಬಳಸಿ ತೆರೆಗೆ ತರಲಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲೇ ಇದೊಂದು ದೃಶ್ಯ ಕಾವ್ಯವಾಗಲಿದೆ ಎಂಬ ನಿರೀಕ್ಷೆ ಮೂಡಿದೆ. ಈ ಬೃಹತ್ ಸಿನಿಮಾವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಆಸ್ಕರ್ ಪ್ರಶಸ್ತಿ ವಿಜೇತ DNEG ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ.

ಇದನ್ನು ನೋಡಿ : SIR ಪ್ರಕ್ರಿಯೆಯಲ್ಲಿ ಗೊಂದಲ ವಿಚಾರ – DCM ಪರಮೇಶ್ವರ್ ಏನಂದ್ರು ಗೊತ್ತಾ




