S. Janaki ಅವರ ಅಂತ್ಯಸಂಸ್ಕಾರ ಅವರ ನೆಚ್ಚಿನ ತೋಟದಲ್ಲೇ ನಡೆಯಲಿದೆ.

ವಿಧಿವಶರಾದ ಗಾನಕೋಗಿಲೆ ಎಸ್. ಜಾನಕಿ ಅವರ ಅಂತ್ಯಸಂಸ್ಕಾರದ ಸಿದ್ಧತೆಗಳು ಮೈಸೂರಿನ ಸರಗೂರು ಸಮೀಪದ ಕಣಿಯನಹುಂಡಿ ಗ್ರಾಮದಲ್ಲಿ ಭರದಿಂದ ಸಾಗಿವೆ. ಇಂದು ಸಂಜೆ 5.30ರೊಳಗೆ ಅವರ ಅಂತಿಮ ವಿಧಿವಿಧಾನಗಳು ನೆರವೇರಲಿವೆ.
ನೆಚ್ಚಿನ ತೋಟದಲ್ಲೇ ಎಸ್. ಜಾನಕಿ ಅಂತ್ಯಸಂಸ್ಕಾರ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಾನಕಿ ಅಮ್ಮ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. 80ರ ದಶಕದಲ್ಲಿ ʼಜಾನಕಮ್ಮʼ ಜನಪ್ರಿಯತೆ ಗಳಿಸಿದ್ದರು. ʼಭಾರತದ ನೈಟಿಂಗೇಲ್ʼ ಅಂತಲೇ ಹೆಸರುವಾಸಿಯಾಗಿದ್ದರು. ಸುಮಾರು 48 ಸಾವಿರ ಗೀತೆಗಳನ್ನು ಹಾಡಿದ್ದರು.

ಜಾನಕಿ ಅಮ್ಮನವರು ಆಂಧ್ರಪ್ರದೇಶದಲ್ಲಿ ಜನಿಸಿದ್ದರೂ ಕರ್ನಾಟಕದ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು. ಅಲ್ಲದೇ, ಕನ್ನಡದಲ್ಲೇ ಹೆಚ್ಚು ಹಾಡುಗಳನ್ನು ಹಾಡಿದ್ದರು. 4 ರಾಷ್ಟ್ರೀಯ ಪ್ರಶಸ್ತಿ, 33 ವಿವಿಧ ರಾಜ್ಯ ಪ್ರಶಸ್ತಿ, ಮೈಸೂರು ವಿವಿ ಗೌರವ ಡಾಕ್ಟರೇಟ್, ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.
ಜಾನಕಿಯಮ್ಮನ ಕೊನೆಯ ಆಸೆ ಈಡೇರಿಸುತ್ತಿರುವ ಕುಟುಂಬ
ಜೀವಂತವಾಗಿದ್ದಾಗಲೇ ತಮ್ಮ ನಿಧನದ ಬಳಿಕ ನೆಚ್ಚಿನ ತೋಟದಲ್ಲೇ ಅಂತ್ಯಸಂಸ್ಕಾರ ಮಾಡಬೇಕೆಂಬ ಆಸೆಯನ್ನು ಎಸ್. ಜಾನಕಿ ವ್ಯಕ್ತಪಡಿಸಿದ್ದರು. ಅದರಂತೆ ಕಣಿಯನಹುಂಡಿಯಲ್ಲಿರುವ ತೋಟದಲ್ಲೇ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಹಾಗೂ ಜಿಲ್ಲಾಡಳಿತ ನಿರ್ಧರಿಸಿದೆ.
ಇದನ್ನೂ ಓದಿ : ಬಹುನಿರೀಕ್ಷಿತ ರಾಮಾಯಣ ಟ್ರೇಲರ್ ರಿಲೀಸ್ಗೆ ಡೇಟ್ ಫಿಕ್ಸ್

ಪತಿಯ ನೆನಪಿನಲ್ಲಿ ಸರಳ ಜೀವನ ನಡೆಸಿದ್ದ ಜಾನಕಿಯಮ್ಮ
ಪತಿ ನಿಧನರಾದ ಬಳಿಕ ತಮ್ಮಲ್ಲಿದ್ದ ಎಲ್ಲಾ ರೇಷ್ಮೆ ಸೀರೆಗಳನ್ನ ದಾನ ಮಾಡಿದ್ದ ಜಾನಕಿಯಮ್ಮ, ನಂತರ ಯಾರಾದರೂ ಬಣ್ಣದ ಸೀರೆಗಳನ್ನು ಉಡುಗೊರೆಯಾಗಿ ನೀಡಿದರೂ ಅವನ್ನು ಇಟ್ಟುಕೊಳ್ಳದೇ ಇತರರಿಗೆ ನೀಡುತ್ತಿದ್ದರು. ಪತಿಯ ನೆನಪಿನಲ್ಲಿ ಬಿಳಿ ಸೀರೆಯನ್ನೇ ಧರಿಸಿದ್ದ ಅವರ ಜೀವನಶೈಲಿ ಎಲ್ಲರ ಗೌರವಕ್ಕೆ ಪಾತ್ರವಾಗಿತ್ತು.

ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಎಸ್. ಜಾನಕಿ ಅವರ ಅಗಲಿಕೆ ಅಭಿಮಾನಿಗಳಲ್ಲಿ ದುಃಖ ಮೂಡಿಸಿದ್ದು, ಅವರ ಅಂತಿಮ ದರ್ಶನಕ್ಕೆ ಗಣ್ಯರು, ಕಲಾವಿದರು ಮತ್ತು ಸಾವಿರಾರು ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ.
MUST WATCH: ಬುಗುರಿ ಆಡಲು ಹೋದವನ ದುರಂತ ಅಂತ್ಯ..! ಕರೆಂಟ್ ಶಾಕ್ ಹೊಡೆದು ಸ್ಟೂಡೆಂಟ್ ಸಾ*




