Birthday ಪ್ರಯುಕ್ತ ನೆಚ್ಚಿನ ಫ್ಯಾನ್ಸ್ಗೆ ಹ್ಯಾಟ್ರಿಕ್ ಶಿವಣ್ಣ ಕಡೆಯಿಂದ ಗಿಫ್ಟ್

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ಕುಮಾರ್ ಅವರು ತಮ್ಮ ಅಭಿಮಾನಿಗಳೊಂದಿಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಕೇಕ್ ಹಾಗೂ ಹಾರ ತರಬಾರದು ಎಂದು ಮೊದಲೇ ಮನವಿ ಮಾಡಿದ್ದ ಶಿವಣ್ಣ, ಈ ಬಾರಿ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನೇ ನೀಡಿದ್ದಾರೆ.
‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್’ ಹೆಸರಿನ ಉಚಿತ ಆರೋಗ್ಯ ಕಾರ್ಡ್ಗಳನ್ನು ಶಿವರಾಜ್ಕುಮಾರ್ ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಿಂದ ಸುಮಾರು 2,500 ಅಭಿಮಾನಿಗಳ ಕುಟುಂಬಗಳಿಗೆ ಪ್ರಯೋಜನವಾಗಲಿದ್ದು, ಅಭಿಮಾನಿಗಳ ಜೊತೆಗೆ ಅವರ ಕುಟುಂಬದವರಿಗೂ ಈ ಕಾರ್ಡ್ ಅನ್ವಯವಾಗಲಿದೆ.
ಇದನ್ನೂ ಓದಿ : ನೆಚ್ಚಿನ ತೋಟದಲ್ಲೇ ಗಾನ ಕೋಗಿಲೆಯ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ

ಈ ಹೆಲ್ತ್ ಕಾರ್ಡ್ ಮೂಲಕ ಉಚಿತ ಆರೋಗ್ಯ ತಪಾಸಣೆ, ಹೃದಯ ಸಂಬಂಧಿ ಚಿಕಿತ್ಸೆಗೆ ವಿಶೇಷ ಸೌಲಭ್ಯ, ಹೈ-ಸ್ಪೀಡ್ ಆಂಬುಲೆನ್ಸ್ ಸೇವೆ ಸೇರಿದಂತೆ ಹಲವು ಆರೋಗ್ಯ ಸೇವೆಗಳು ದೊರೆಯಲಿವೆ. ಈ ಕಾರ್ಡ್ಗಳು 2029ರವರೆಗೆ ಮಾನ್ಯವಾಗಿರಲಿವೆ.
ಇತ್ತೀಚೆಗೆ ವೈದೇಹಿ ಸ್ಪೆಷಾಲಿಟಿ ಆಸ್ಪತ್ರೆಯೊಂದಿಗೆ ಕೈಜೋಡಿಸಿರುವ ಶಿವರಾಜ್ಕುಮಾರ್, ಅದೇ ಆಸ್ಪತ್ರೆಯ ಸಹಯೋಗದಲ್ಲಿ ಈ ಆರೋಗ್ಯ ಕಾರ್ಡ್ಗಳನ್ನು ಬಿಡುಗಡೆ ಮಾಡಿದ್ದಾರೆ. ಅಭಿಮಾನಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ಶಿವಣ್ಣ ಅವರ ಈ ನಡೆಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

MUST WATCH: ಗಾನ ನಿಲ್ಲಿಸಿದ ಗಾನ ಕೋಗಿಲೆ ಜಾನಕಮ್ಮ – ಕಂಬನಿ ಮಿಡಿದ ಸಾಧುಕೋಕಿಲ, ರಾಜೇಶ್ ಕೃಷ್ಣನ್




