Gold Rate ಗ್ರಾಮ್ಗೆ 45 ರೂ, ಬೆಳ್ಳಿ ಬೆಲೆ 5 ರೂ ಇಳಿಕೆ

ಚಿನ್ನ ಹಾಗೂ ಬೆಳ್ಳಿ ಖರೀದಿದಾರರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಶುಕ್ರವಾರ ಏರಿಕೆ ಕಂಡಿದ್ದ ಬಂಗಾರದ ದರ ಗ್ರಾಂಗೆ 45 ರೂಪಾಯಿ ಇಳಿಕೆಯಾಗಿದ್ದು, ಬೆಳ್ಳಿ ದರವೂ ಗ್ರಾಂಗೆ 5 ರೂಪಾಯಿ ಕಡಿಮೆಯಾಗಿದೆ.
ಚಿನ್ನ-ಬೆಳ್ಳಿ ದರದಲ್ಲಿ ಭರ್ಜರಿ ಇಳಿಕೆ
ದೇಶದಲ್ಲಿ ಸದ್ಯ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ 32 ಸಾವಿರ 300 ರೂಪಾಯಿಯಾಗಿದ್ದು, 24 ಕ್ಯಾರಟ್ನ 10 ಗ್ರಾಂ ಅಪರಂಜಿ ಚಿನ್ನದ ಬೆಲೆ 1 ಲಕ್ಷ 44 ಸಾವಿರ 330 ರೂಪಾಯಿಯಾಗಿದೆ. 18 ಕ್ಯಾರಟ್ನ ಚಿನ್ನವೂ ಇಳಿಕೆ ಕಂಡಿದೆ.
ಇದನ್ನೂ ಓದಿ: ಆಭರಣ ಪ್ರಿಯರಿಗೆ ಗುಡ್ನ್ಯೂಸ್ – ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ 45 ರೂ, ಬೆಳ್ಳಿ ಬೆಲೆ 5 ರೂ ಇಳಿದಿದೆ.
ಬೆಂಗಳೂರಿನಲ್ಲೂ ಇದೇ ದರ ಮುಂದುವರಿದಿದ್ದು, 22 ಕ್ಯಾರಟ್ನ 10 ಗ್ರಾಂ ಚಿನ್ನ 1 ಲಕ್ಷ 32 ಸಾವಿರ 300 ರೂಪಾಯಿ ಹಾಗೂ 24 ಕ್ಯಾರಟ್ನ 10 ಗ್ರಾಂ ಚಿನ್ನ 1 ಲಕ್ಷ 44 ಸಾವಿರ 330 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಳ್ಳಿ 100 ಗ್ರಾಂಗೆ 23 ಸಾವಿರ 400 ರೂಪಾಯಿ ದರ ನಿಗದಿಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಅಲ್ಪ ಪ್ರಮಾಣದ ಏರಿಳಿತದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳಿಗೆ ಅನುಗುಣವಾಗಿ ದರದಲ್ಲಿ ಮತ್ತಷ್ಟು ಬದಲಾವಣೆ ಸಾಧ್ಯತೆ ಇದೆ.

MUST WATCH: ಜಾನಕಮ್ಮನ ಪ್ರತಿ ಭೇಟಿಯೂ ಅಮರವಾಗಿತ್ತು – ಗಾಯಕ ವಿಜಯ್ ಪ್ರಕಾಶ್ ಭಾವುಕ ಮಾತು




