ಇತ್ತೀಚೆಗಷ್ಟೇ ತಂದೆಯಾದ Daali Dhananjay , ಇದೀಗ ಮೊದಲ ಬಾರಿಗೆ ತಮ್ಮ ಮುದ್ದು ಮಗುವಿನ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಎರಡು ತಿಂಗಳ ಹಿಂದೆ ತಂದೆಯಾಗಿದ್ದ ಡಾಲಿ
ಎರಡು ತಿಂಗಳ ಹಿಂದೆ ಪತ್ನಿ ಡಾ. ಧನ್ಯತಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಆಗಮನದ ಸುದ್ದಿಯನ್ನು ಆಗಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಧನಂಜಯ್, ಇದೀಗ ಮತ್ತೊಮ್ಮೆ ವಿಶೇಷ ಪೋಸ್ಟ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಪೋಟೋಗೆ ಮದರ್ ಪ್ರಾಮಿಸ್ ಚಿತ್ರದ ಹಾಡು ಬಳಕೆ
ತಮ್ಮ ‘ಮದರ್ ಪ್ರಾಮಿಸ್’ ಚಿತ್ರದ ‘ಓ ಬೆಳಕೇ’ ಹಾಡನ್ನು ಹಿನ್ನೆಲೆಯಾಗಿ ಬಳಸಿಕೊಂಡು ಪೋಸ್ಟ್ ಹಂಚಿಕೊಂಡಿರುವ ಧನಂಜಯ್, ಮಗುವಿನ ಮುಖವನ್ನು ಬಹಿರಂಗಪಡಿಸದೆ, ಪುಟ್ಟ ಪಾದಗಳು ಮತ್ತು ತಮ್ಮ ಎದೆಯ ಮೇಲೆ ಮಲಗಿರುವ ಭಾವನಾತ್ಮಕ ಕ್ಷಣವನ್ನು ಸೆರೆಹಿಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದನ್ನು ನೋಡಿ : ಮೃತ ಭುವನ ಮನೆಗೆ ಡಿಸಿಎಂ ಪರಮೇಶ್ವರ್ ವಿಸಿಟ್- ಕುಟುಂಬಸ್ಥರಿಗೆ ಧೈರ್ಯ ತುಂಬಿದ ಪರಂ

ಡಾಲಿ ಪೋಸ್ಟ್ ವೈರಲ್
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಸಿನಿ ತಾರೆಯರು ಡಾಲಿ ಕುಟುಂಬಕ್ಕೆ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ.
ಇದನ್ನು ಓದಿ : Daali ಈಗ ಡ್ಯಾಡಿ – ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ..!!




