ರಾಜ್ಯದಲ್ಲಿ ರದ್ದಾಗಿದ್ದ BPL ಕಾರ್ಡ್ ಮತ್ತೆ ಸಿಗಲಿದೆ : ಈ ದಾಖಲೆಗಳೊಂದಿಗೆ ಈಗಲೇ ಅರ್ಜಿ ಸಲ್ಲಿಸಿ!

ರಾಜ್ಯದ BPL ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಹಿಸುದ್ದಿ ನೀಡಿದೆ. ಅನರ್ಹತೆಯ ನೆಪದಲ್ಲಿ ರದ್ದಾಗಿದ್ದ ಅಥವಾ ಎಪಿಎಲ್ ಕಾರ್ಡ್ಗಳಾಗಿ ಬದಲಾಗಿದ್ದ ಬಿಪಿಎಲ್ ಕಾರ್ಡ್ಗಳನ್ನು ಅರ್ಹರು ಮತ್ತೆ ಪಡೆದುಕೊಳ್ಳಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ವಿಧಿಸಲಾಗಿದ್ದ 45 ದಿನಗಳ ಗಡುವನ್ನೂ ಸರ್ಕಾರ ರದ್ದುಗೊಳಿಸಿದೆ.
ಹಲವು ಅರ್ಹ ಬಡ ಕುಟುಂಬಗಳೂ ಸಮಸ್ಯೆ
‘ಕುಟುಂಬ’ ತಂತ್ರಾಂಶದ ಪರಿಶೀಲನೆ ವೇಳೆ ಸುಮಾರು 13.87 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿಗಳಲ್ಲಿ ನಿಯಮ ಉಲ್ಲಂಘನೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 4 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿ ಎಪಿಎಲ್ಗೆ ವರ್ಗಾಯಿಸಲಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಹಲವು ಅರ್ಹ ಬಡ ಕುಟುಂಬಗಳೂ ಸಮಸ್ಯೆಗೆ ಸಿಲುಕಿದ್ದವು.

ಈಗಲೇ ಸಲ್ಲಿಸಿ ಅರ್ಜಿ!
ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಇದೀಗ ಹೊಸ ಅವಕಾಶ ನೀಡಿದೆ. ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ತಮ್ಮ ತಾಲೂಕಿನ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ, ರದ್ದಾಗಿರುವ ತಮ್ಮ ಬಿಪಿಎಲ್ ಕಾರ್ಡ್ನ್ನು ಮರುಸ್ಥಾಪಿಸಿಕೊಳ್ಳಬಹುದು ಎಂದು ಆಹಾರ ಇಲಾಖೆ ತಿಳಿಸಿದೆ.
ಇದನ್ನು ಓದಿ : ಅನ್ನಭಾಗ್ಯ ಪರಿಷ್ಕರಣೆ – 14 ಲಕ್ಷ ಅನರ್ಹರ BPL ಕಾರ್ಡ್ ರದ್ದಾಗುತ್ತಾ?
ಅರ್ಹ ಕುಟುಂಬಗಳಿಹೆ ಪಡಿತರ ಸೌಲಭ್ಯ
ಹೊಸ ಬಿಪಿಎಲ್ ಕಾರ್ಡ್ಗಳ ವಿತರಣೆ ಇನ್ನೂ ಬಾಕಿ ಇರುವ ಹಿನ್ನೆಲೆಯಲ್ಲಿ, ಸದ್ಯಕ್ಕೆ ಹೊಸ ಅರ್ಜಿಗಳಿಗಿಂತ ಈಗಾಗಲೇ ರದ್ದಾಗಿರುವ ಅರ್ಹ ಬಿಪಿಎಲ್ ಕಾರ್ಡ್ಗಳನ್ನು ಮರು ಚಾಲನೆಗೆ ತರುವುದೇ ಸರ್ಕಾರದ ಆದ್ಯತೆಯಾಗಿದೆ.
ಇದರಿಂದ ಅರ್ಹ ಕುಟುಂಬಗಳು ಪಡಿತರ ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುತ್ತದೆ.

ಮರುಸ್ಥಾಪನೆಗೆ ಇರುವ ಪ್ರಮುಖ ಮಾನದಂಡಗಳು
ಬಿಪಿಎಲ್ ಕಾರ್ಡ್ ಮರುಸ್ಥಾಪನೆಗೆ ಅರ್ಜಿದಾರರು ಕೆಲವು ಷರತ್ತುಗಳನ್ನು ಕಡ್ಡಾಯವಾಗಿ ಪೂರೈಸಬೇಕು.
- ಆದಾಯ ತೆರಿಗೆ ಪಾವತಿದಾರರಾಗಿರಬಾರದು.
- ಕುಟುಂಬದ ಹೆಸರಿನಲ್ಲಿ 7 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಇರಬಾರದು.
- ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷ ಮೀರಿರಬಾರದು.
ಅರ್ಜಿ ಸಲ್ಲಿಸಿದ ಬಳಿಕ ತಹಸೀಲ್ದಾರ್ ಸ್ಥಳ ಪರಿಶೀಲನೆ ಹಾಗೂ ದಾಖಲೆಗಳ ತನಿಖೆ ನಡೆಸಲಿದ್ದಾರೆ.
ವರದಿ ಆಧರಿಸಿ ಅರ್ಜಿದಾರರು ಅರ್ಹರೆಂದು ದೃಢಪಟ್ಟರೆ, ಆಹಾರ ಇಲಾಖೆಯ ಉಪ ನಿರ್ದೇಶಕರು ಬಿಪಿಎಲ್ ಕಾರ್ಡ್ನ್ನು ಮರುಸ್ಥಾಪಿಸುವ ಕ್ರಮ ಕೈಗೊಳ್ಳಲಿದ್ದಾರೆ.

ಇದನ್ನು ನೋಡಿ : ಭಾರತೀಯ ಟ್ರಾಕ್ಟರ್ ಉದ್ಯಮದಲ್ಲಿ ಹೊಸ ಕ್ರಾಂತಿ – VALDO TRACTORS ಬಗ್ಗೆ ನಿಮಗೆಷ್ಟು ಗೊತ್ತು..?




