
ಅ.1 ರಿಂದ LPG ಗ್ರಾಹಕರಿಗೆ ‘ಆಧಾರ್ ಇ-ಕೆವೈಸಿ’ ಕಡ್ಡಾಯ – ಇಲ್ಲದಿದ್ದರೆ ಸಿಗಲ್ಲ ಗ್ಯಾಸ್ ಸಿಲಿಂಡರ್
ದೇಶಾದ್ಯಂತ ಎಲ್ಪಿಜಿ (LPG) ಸಿಲಿಂಡರ್ ಬಳಕೆದಾರರಿಗೆ ತೈಲ ಕಂಪನಿಗಳು ಮಹತ್ವದ ಸೂಚನೆ ನೀಡಿವೆ. ಅಕ್ಟೋಬರ್ 1ರಿಂದ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ಗೆ ಆಧಾರ್ ಆಧಾರಿತ ಇ-ಕೆವೈಸಿ (e-KYC) ಕಡ್ಡಾಯಗೊಳಿಸಲಾಗಿದೆ. . ಸಬ್ಸಿಡಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ಅಕ್ರಮ ಬಳಕೆಗೆ ತಡೆಹಾಕಲು ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ.
3.16 ಕೋಟಿ ಗ್ರಾಹಕರಿಂದ ಇನ್ನೂ ಇ-ಕೆವೈಸಿ ಬಾಕಿ
ದೇಶದಲ್ಲಿ ಕೋಟ್ಯಂತರ ಎಲ್ಪಿಜಿ ಗ್ರಾಹಕರು ಇ-ಕೆವೈಸಿ ಪೂರ್ಣಗೊಳಿಸಿರುವುದಾಗಿ ವರದಿಗಳು ತಿಳಿಸಿವೆ.
ಸುಮಾರು 27.43 ಕೋಟಿ ಗ್ರಾಹಕರು ಈಗಾಗಲೇ ಆಧಾರ್ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಇನ್ನೂ ಸುಮಾರು 3.16 ಕೋಟಿ ಗ್ರಾಹಕರು ಇ-ಕೆವೈಸಿ ಮಾಡಿಸಿಕೊಳ್ಳಬೇಕಿದೆ ಎನ್ನಲಾಗಿದೆ.

ಮನೆಯಲ್ಲೇ ಕುಳಿತು ಅಥವಾ ಡೆಲಿವರಿ ಬಾಯ್ ಬಳಿ ಇ-ಕೆವೈಸಿ ಮಾಡಲು ಅವಕಾಶ: ಗ್ರಾಹಕರು ಇ-ಕೆವೈಸಿಗಾಗಿ ಸುಲಭವಾಗಿ ಅನುಸರಿಸಬಹುದಾದ ಮೂರು ಮುಖ್ಯ ಮಾರ್ಗಗಳು ಇಲ್ಲಿವೆ:
ಡೆಲಿವರಿ ವೇಳೆ ಸಿಲಿಂಡರ್ ಪೂರೈಕೆದಾರರ ಬಳಿ: ನಿಮ್ಮ ಮನೆಗೆ ಸಿಲಿಂಡರ್ ಡೆಲಿವರಿ ಮಾಡಲು ಬರುವ ವ್ಯಕ್ತಿಯ ಬಳಿ ಇರುವ ಮೊಬೈಲ್ ಆ್ಯಪ್ನಲ್ಲಿ ಬೆರಳಚ್ಚು (ಬಯೋಮೆಟ್ರಿಕ್) ನೀಡಿ ಇ-ಕೆವೈಸಿ ಪ್ರಕ್ರಿಯೆಯನ್ನು ಕ್ಷಣಾರ್ಧದಲ್ಲಿ ಮುಗಿಸಬಹುದು.
ಗ್ಯಾಸ್ ಏಜೆನ್ಸಿಗೆ ನೇರ ಭೇಟಿ: ಗ್ರಾಹಕರು ತಮ್ಮ ಹತ್ತಿರದ ಗ್ಯಾಸ್ ವಿತರಕರ (ಏಜೆನ್ಸಿ) ಕಚೇರಿಗೆ ನೇರವಾಗಿ ತೆರಳಿ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಪೂರ್ಣಗೊಳಿಸಬಹುದು.

ಮೊಬೈಲ್ ಆ್ಯಪ್ ಮೂಲಕ ಸೆಲ್ಫ್ ಇ-ಕೆವೈಸಿ: ಗ್ರಾಹಕರು ತಮ್ಮ ಮೊಬೈಲ್ನಲ್ಲೇ ಸ್ವತಃ ಇ-ಕೆವೈಸಿ ಮಾಡಿಕೊಳ್ಳಬಹುದು. ಇಂಡಿಯನ್ ಆಯಿಲ್ ಬಳಕೆದಾರರು ‘Indian Oil One’, ಭಾರತ್ ಗ್ಯಾಸ್ ಬಳಕೆದಾರರು ‘Hello BPCL’ ಹಾಗೂ ಹೆಚ್ಪಿ ಬಳಕೆದಾರರು ‘HP Pay’ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಮನೆಯಲ್ಲೇ ಕುಳಿತು ಇ-ಕೆವೈಸಿ ಪೂರ್ಣಗೊಳಿಸಬಹುದು.
REDA THIS : ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ಗ್ರಾಹಕರಿಗೆ LPG ಬಿಗ್ ಶಾಕ್!

ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ರಹಿತ ಮಾರುಕಟ್ಟೆ ದರ ಅನ್ವಯ
ವರದಿಗಳ ಪ್ರಕಾರ, ಸಬ್ಸಿಡಿ ಸೌಲಭ್ಯ ಪಡೆಯಲು ಇ-ಕೆವೈಸಿ ಅಥವಾ ಬಯೋಮೆಟ್ರಿಕ್ ದೃಢೀಕರಣ ಅಗತ್ಯವಾಗಬಹುದು.
ಸಬ್ಸಿಡಿ ಬೇಡವೆಂದು ಗ್ರಾಹಕರು ಸ್ವಯಂ ಘೋಷಿಸಿದರೆ, ಸಿಲಿಂಡರ್ನ್ನು ಸಬ್ಸಿಡಿ ರಹಿತ ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾಗುತ್ತದೆ.
ಹೀಗಾಗಿ LPG ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ತಮ್ಮ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯವಿದ್ದರೆ ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.

MUST WATCH : K.N.RAJANNA ಯಾವತ್ತಾದ್ರು ಗಂಭೀರ ಹೇಳಿಕೆ ಕೊಟ್ಟವ್ರಾ..? RANGANATH ಟಾಂಗ್..!




