Accident : ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಗಳು ಮುಖಾಮುಖಿ ಡಿಕ್ಕಿ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಚಾಲಕರು ಮೃತಪಟ್ಟಿದ್ದು, ಹತ್ತುಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೋಂಗರಗಾಂವ ಕ್ರಾಸ್ ಬಳಿ ಈ ಭೀಕರ Accident ಸಂಭವಿಸಿದೆ.
ಇದನ್ನು ಓದಿ : ಬಸ್ಗಳ ಮಧ್ಯೆ ಭೀಕರ Accident – ಇಬ್ಬರು ಸಾವು, ಹಲವರಿಗೆ ಗಂಭೀರ ಗಾಯ

ಬಸ್ ಚಾಲಕರು ಸಾವು – 10 ಮಂದಿಗೆ ಗಂಭೀರ ಗಾಯ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ನ ಒಂದನೇ ಡಿಪೋ ಹಾಗೂ ಎರಡನೇ ಡಿಪೋಗೆ ಸೇರಿದ ಸಾರಿಗೆ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಓರ್ವ ಬಸ್ ಚಾಲಕ ತುಕಾರಾಮಏಕನಾಥರಾವ್ಬಿರಾದಾರ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಮತ್ತೋರ್ವ ಬಸ್ ಚಾಲಕ ಶಿವಾನಂದ ರೆಡ್ಡಿ ಆಸ್ಪತ್ರೆಗೆ ಸೇರಿಸುವ ಮಾರ್ಗಮಧ್ಯೆ ಕೊನೆಯುಸಿರು ಎಳೆದಿದ್ದಾರೆ. ಇನ್ನು ಭೀಕರ ಅಪಘಾತದಲ್ಲಿ ಎರಡು ಬಸ್ಗಳು ಫುಲ್ ಜಖಂ ಆಗಿದ್ದು, ಎರಡು ಬಸ್ಗಳಲ್ಲಿ ಇದ್ದ 10 ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡಿರುವವರನ್ನು ಜಿಮ್ಸ್ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Accident – ಪ್ರಕರಣ ದಾಖಲು!
ಇನ್ನು ಘಟನಾ ಸ್ಥಳಕ್ಕೆ ಈಶಾನ್ಯ ವಲಯ DIG ಶಾಂತನುಸಿನ್ಹಾ, ಕಲಬುರಗಿ SP ಅಡ್ಡೂರುಶ್ರೀನಿವಾಸಲು, ASP ಮಹೇಶ್ಮೇಘಣ್ಣವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ಖಾಲಿ ನಿವೇಶನಗಳಿಗೆ TOUGH RULES – ಏನ್ ರೂಲ್ಸ್ ಮಾಡಿದ್ದಾರೆ ಗೊತ್ತಾ?





