ಸಾಲು ಸಾಲು ಸೋಲು, ಅವಮಾನ.. ತಿರುಪತಿಗೆ ಬಂದು ಹರಕೆ ತೀರಿಸಿದ Hardik Pandya

ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂದು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಕೇಶ ಮುಂಡನ ಮಾಡಿಸಿಕೊಂಡ ಪಾಂಡ್ಯ ಹೊಸ ಲುಕ್ನಲ್ಲಿ ಕಾಣಿಸಿಕೋಮಡಿದ್ದಾರೆ. ಈ ಹಿಂದೆ ‘ಪ್ಲಾಟಿನಂ ಬ್ಲಾಂಡ್ ಬಝ್ ಕಟ್’ ಹೇರ್ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದ ಪಾಂಡ್ಯ, ಇದೀಗ ಬೋಳು ತಲೆ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಪಾಂಡ್ಯ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಸುಪ್ರಭಾತ ಸೇವೆಯಲ್ಲಿ ಭಾಗಿ
ಮುಂಜಾನೆ ನಡೆದ ಪವಿತ್ರ ಸುಪ್ರಭಾತ ಸೇವೆಯಲ್ಲಿ ಪಾಲ್ಗೊಂಡ ಹಾರ್ದಿಕ್ ಪಾಂಡ್ಯ ಅವರು ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಿರುಮಲ ತಿರುಪತಿ ದೇವಸ್ಥಾನಂ (TTD) ಅಧಿಕಾರಿಗಳು ಹಾಗೂ ಅರ್ಚಕರು ಅವರನ್ನು ಸ್ವಾಗತಿಸಿ ದರ್ಶನದ ವ್ಯವಸ್ಥೆ ಮಾಡಿದರು.
ಇದನ್ನು ಓದಿ : ಮಹಿಕಾ ಶರ್ಮಾ ಜತೆಗಿನ ರೊಮ್ಯಾಂಟಿಕ್ ಫೋಟೊ ಹಂಚಿಕೊಂಡ Hardik Pandya

ಇನ್ನು ದರ್ಶನದ ಬಳಿಕ ರಂಗನಾಯಕುಲ ಮಂಟಪದಲ್ಲಿ ಅರ್ಚಕರು ವೇದ ಆಶೀರ್ವಚನ ನೀಡಿ, ತೀರ್ಥ ಹಾಗೂ ಪ್ರಸಾದವನ್ನು ವಿತರಿಸಿದರು. ಈ ಆಧ್ಯಾತ್ಮಿಕ ಭೇಟಿಯ ವೇಳೆ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಅವರ ಆಪ್ತ ಗೆಳತಿ ಮಹಿಕಾ ಶರ್ಮಾ ಕೂಡ ಜೊತೆಯಲ್ಲಿದ್ದರು.

ಪಾಂಡ್ಯ ಕಂಬ್ಯಾಕ್ ಯಾವಾಗ?
ಗಾಯದ ಸಮಸ್ಯೆಯಿಂದಾಗಿ ಕಳೆದ ಕೆಲವು ಸರಣಿಗಳಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಕ್ಕೂ ಸಿದ್ಧರಾಗಿರುವ ಅವರು, ಮುಂಬರುವ ಏಕದಿನ (ODI) ಹಾಗೂ ಟಿ20 ಸರಣಿಗಳಿಗೆ ಆಯ್ಕೆಗೆ ಲಭ್ಯರಾಗುವ ಸಾಧ್ಯತೆ ಇದೆ. ಅವರ ಮರಳುವಿಕೆಯಿಂದ ಟೀಮ್ ಇಂಡಿಯಾದ ಮಧ್ಯಮ ಕ್ರಮ ಹಾಗೂ ವೇಗದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಸಿಗುವ ನಿರೀಕ್ಷೆಯಿದೆ.

ಇದನ್ನು ನೋಡಿ : ಸಂಸತ್ನಲ್ಲಿ BJP ನಾಯಕರನ್ನು ತರಾಟೆಗೆ ತೆಗೆದುಕೊಂಡ ಸಂಸದೆ PRIYANKA GANDHI




