CM ಸಂಪುಟ ಪಟ್ಟಿ ಫೈನಲ್? ಜಿಲ್ಲಾವಾರು 20 ಮಂದಿ ಹೆಸರು ಅಂತಿಮ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಂತಿಮ ಹಂತ ತಲುಪಿದ್ದು, ಸೋಮವಾರವೇ ಹೊಸ ಸಚಿವರ ಪ್ರಮಾಣವಚನ ನಡೆಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 18ರಿಂದ 20 ಶಾಸಕರ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ಅಂತಿಮ ಒಪ್ಪಿಗೆ ನೀಡಿದ ಬಳಿಕ ಹೊಸ ಸಚಿವರ ಹೆಸರು ಪ್ರಕಟವಾಗುವ ನಿರೀಕ್ಷೆಯಿದೆ.
ಹೈಕಮಾಂಡ್ ಫೈನಲ್ ಲಿಸ್ಟ್
ಸಚಿವ ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಹಿರಿಯ ನಾಯಕರು ಸಭೆ ನಡೆಸಿದ್ದರೂ ಅಂತಿಮ ಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಹೈಕಮಾಂಡ್ನ ಅಂತಿಮ ಪಟ್ಟಿಯೊಂದಿಗೆ ಬೆಂಗಳೂರಿಗೆ ಆಗಮಿಸಲಿದ್ದು, 2ನೇ ಹಂತದ ಸಚಿವ ಸಂಪುಟ ಸೇರುವವರು ಯಾರು ಅನ್ನೋ ಕುತೂಹಲ ಮನೆ ಮಾಡಿದೆ.

ನಾಯಕರೊಂದಿಗೆ ಸಭೆ
ಇಂದು ಕೆ.ಸಿ. ವೇಣುಗೋಪಾಲ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿನಲ್ಲಿ ರಾಜ್ಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಅಂತಿಮ ರೂಪ ಸಿಗುವ ನಿರೀಕ್ಷೆಯಿದೆ.
ಇದನ್ನು ಓದಿ : ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ – ಸೋಮವಾರ ಸಂಜೆ ಪ್ರಮಾಣವಚನ ಫಿಕ್ಸ್
ಜಿಲ್ಲಾವಾರು 20 ಮಂದಿ ಹೆಸರು ಅಂತಿಮ
ಮೂಲಗಳ ಪ್ರಕಾರ, ಸಚಿವ ಸ್ಥಾನಕ್ಕಾಗಿ 30ರಿಂದ 40ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ಈ ಬಾರಿ ಜಾತಿ ಹಾಗೂ ಪ್ರಾದೇಶಿಕ ಸಮತೋಲನಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಇದುವರೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದ ಜಿಲ್ಲೆಗಳಿಗೂ ಅವಕಾಶ ನೀಡುವ ಸಾಧ್ಯತೆ ಇದೆ.

ಜಿಲ್ಲಾವಾರು ಸಂಭಾವ್ಯ ಸಚಿವರ ಲಿಸ್ಟ್
- ಕಲಬುರಗಿ: ಅಜಯ್ ಧರ್ಮಸಿಂಗ್
- ವಿಜಯಪುರ: ಯಶವಂತರಾಯಗೌಡ ಪಾಟೀಲ
- ಬೆಂಗಳೂರು ಗ್ರಾಮಾಂತರ: ಶರತ್ ಬಚ್ಚೇಗೌಡ
- ಬೆಂಗಳೂರು ನಗರ: ರಿಜ್ವಾನ್ ಅರ್ಷದ್, ಆನೇಕಲ್ ಶಿವಣ್ಣ, ಜಮೀರ್ ಅಹಮದ್ ಖಾನ್
- ಕೊಡಗು: ಎ.ಎಸ್. ಪೊನ್ನಣ್ಣ
- ದಾವಣಗೆರೆ: ಎಸ್.ಎಸ್. ಮಲ್ಲಿಕಾರ್ಜುನ್
- ಬೆಳಗಾವಿ: ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್
- ಚಿತ್ರದುರ್ಗ: ಟಿ. ರಘುಮೂರ್ತಿ
- ಬಳ್ಳಾರಿ: ಅನ್ನಪೂರ್ಣ ತುಕಾರಾಂ
- ಬಾಗಲಕೋಟೆ: ವಿಜಯಾನಂದ ಕಾಶಪ್ಪನವರ್
- ಚಾಮರಾಜನಗರ: ಸಿ. ಪುಟ್ಟರಂಗಶೆಟ್ಟಿ
- ಹಾವೇರಿ: ರುದ್ರಪ್ಪ ಲಮಾಣಿ
- ಮಂಡ್ಯ: ಎನ್. ಚಲುವರಾಯಸ್ವಾಮಿ
- ಧಾರವಾಡ: ಸಂತೋಷ್ ಲಾಡ್
- ಹಾಸನ: ಕೆ.ಎಂ. ಶಿವಲಿಂಗೇಗೌಡ
- ಕೋಲಾರ: ಬಂಗಾರಪೇಟೆ ನಾರಾಯಣಸ್ವಾಮಿ

ಇದನ್ನು ನೋಡಿ : ತುಮಕೂರಿನಲ್ಲಿ ಕಾಂಗ್ರೆಸ್ ನಾಯಕರ ರೋಷಾಗ್ನಿ – ಯಶ್ಪಾಲ್ ವಿರುದ್ಧ ದೂರು ನೀಡಿ ಕ್ರಮಕ್ಕೆ ಆಗ್ರಹ




