Bengaluru : ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್: ಸೋಮವಾರ ಸಂಜೆ 4ಕ್ಕೆ ನೂತನ ಸಚಿವರ ಪ್ರಮಾಣವಚನ

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದ್ದು, ಸೋಮವಾರ (ಆಗಸ್ಟ್ 3) ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಹೈಕಮಾಂಡ್ನಿಂದ ಅಂತಿಮ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಲೋಕಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
18 ಸಚಿವ ಸ್ಥಾನಗಳ ಭರ್ತಿಗೆ ಸಿದ್ಧತೆ
ಆಗಸ್ಟ್ 2ರಂದು ನೂತನ ಸಚಿವರ ಅಂತಿಮ ಪಟ್ಟಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈ ಸೇರಲಿದೆ ಎಂದು ಮೂಲಗಳು ತಿಳಿಸಿವೆ. ಖಾಲಿ ಇರುವ 20 ಸಚಿವ ಸ್ಥಾನಗಳ ಪೈಕಿ ಸುಮಾರು 18 ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ಗೆ ಪ್ರತ್ಯೇಕ ಪಟ್ಟಿಗಳನ್ನು ಸಲ್ಲಿಸಿದ್ದಾರೆ. ಭಾನುವಾರ ಸಂಜೆ ವೇಳೆಗೆ ಅಂತಿಮ ಪಟ್ಟಿ ರಾಜ್ಯ ನಾಯಕರಿಗೆ ತಲುಪುವ ನಿರೀಕ್ಷೆಯಿದೆ.
ಇದನ್ನು ಓದಿ : ಮುಂದುವರೆದ ರಾಜ್ಯ ಸಚಿವ ಸಂಪುಟ ಕಸರತ್ತು – 18 ಮಂದಿಗೆ ಸಚಿವ ಸ್ಥಾನ ಫಿಕ್ಸ್?

ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಪ್ರಮುಖ ಹೆಸರುಗಳು
ಸಚಿವ ಸ್ಥಾನದ ಆಕಾಂಕ್ಷಿಗಳ ಪೈಕಿ ಹಲವು ಶಾಸಕರ ಹೆಸರುಗಳು ಚರ್ಚೆಯಲ್ಲಿವೆ.
- ಎಸ್.ಎಸ್. ಮಲ್ಲಿಕಾರ್ಜುನ – ಲಿಂಗಾಯತ, ದಾವಣಗೆರೆ ಶಾಸಕ
- ಎನ್. ಚಲುವರಾಯಸ್ವಾಮಿ – ಒಕ್ಕಲಿಗ, ನಾಗಮಂಗಲ ಶಾಸಕ
- ಜಮೀರ್ ಅಹ್ಮದ್ – ಮುಸ್ಲಿಂ, ಚಾಮರಾಜಪೇಟೆ ಶಾಸಕ
- ಶರತ್ ಬಚ್ಚೇಗೌಡ – ಒಕ್ಕಲಿಗ, ಹೊಸಕೋಟೆ ಶಾಸಕ
- ಆನೇಕಲ್ ಶಿವಣ್ಣ – ದಲಿತ, ಆನೇಕಲ್ ಶಾಸಕ
- ಕೆ.ಎಸ್. ಬಸವಂತಪ್ಪ – ದಲಿತ ಎಡಗೈ, ಮಾಯಕೊಂಡ ಶಾಸಕ
- ಜೆ.ಎನ್. ಗಣೇಶ – ಎಸ್ಟಿ, ಕಂಪ್ಲಿ ಶಾಸಕ
- ರುದ್ರಪ್ಪ ಲಮಾಣಿ – ದಲಿತ (ಎಸ್ಸಿ ಮೀಸಲು), ಹಾವೇರಿ ಶಾಸಕ
- ಎ.ಎಸ್. ಪೊನ್ನಣ್ಣ – ಕೊಡವ, ವಿರಾಜಪೇಟೆ ಶಾಸಕ
- ಬೇಳೂರು ಗೋಪಾಲಕೃಷ್ಣ – ಈಡಿಗ, ಸಾಗರ ಶಾಸಕ
- ಶಿವಣ್ಣನವರ್ – ಕುರುಬ, ಬ್ಯಾಡಗಿ ಶಾಸಕ
- ಶ್ರೀನಿವಾಸ್ ಮಾನೆ – ಮರಾಠ, ಹಾನಗಲ್ ಶಾಸಕ
- ಮಂಕಾಳು ವೈದ್ಯ – ಮೊಗವೀರ, ಭಟ್ಕಳ ಶಾಸಕ
ಜಮೀರ್ ಅಹ್ಮದ್ ಸೇರ್ಪಡೆ ಬಗ್ಗೆ ಕುತೂಹಲ
ಸಂಭಾವ್ಯ ಪಟ್ಟಿಯಲ್ಲಿ ಜಮೀರ್ ಅಹ್ಮದ್ ಅವರ ಹೆಸರು ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ದಾವಣಗೆರೆ ಉಪಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪ ಅವರ ವಿರುದ್ಧ ಕೇಳಿಬಂದಿತ್ತು. ಈ ವಿಚಾರ ಕಾಂಗ್ರೆಸ್ನಲ್ಲಿ ಚರ್ಚೆಗೆ ಕಾರಣವಾಗಿತ್ತು.
ಬಳಿಕ ಜಮೀರ್ ಅಹ್ಮದ್ ಅವರು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಬಳಿ ಕ್ಷಮೆಯಾಚಿಸಿದ್ದರು ಎನ್ನಲಾಗಿದೆ. ಇದೀಗ ಅವರು ಮತ್ತೆ ಸಚಿವ ಸಂಪುಟ ಸೇರುತ್ತಾರೆಯೇ ಎಂಬುದು ಹೈಕಮಾಂಡ್ನ ಅಂತಿಮ ನಿರ್ಧಾರದ ಮೇಲೆ ಅವಲಂಬಿತವಾಗಿದೆ.

ಹಳೆಯ ಸಚಿವರ ಮರುಸೇರ್ಪಡೆ ಸಾಧ್ಯತೆ
ಸಿದ್ದರಾಮಯ್ಯ ಸಂಪುಟದಲ್ಲಿದ್ದ ಆರು ಮಂದಿ ನಾಯಕರನ್ನು ಮತ್ತೆ ಸಂಪುಟಕ್ಕೆ ಸೇರಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ಶಾಸಕ ಅಪ್ಪಾಜಿಗೌಡ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
“ನನಗೆ ಸಚಿವ ಸ್ಥಾನ ತಪ್ಪಿಸಲು ಷಡ್ಯಂತ್ರ ನಡೆಯುತ್ತಿದೆ. ಆದರೆ ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ,” ಎಂದು ಅಪ್ಪಾಜಿಗೌಡ ಹೇಳಿದ್ದಾರೆ.
ಇದನ್ನು ನೋಡಿ : ಹಾಸನದಲ್ಲಿ ಮತ್ತೆ ಕಾಡಾನೆ ಕಾಟ – ಕಾಡಾನೆ ದಾಳಿಗೆ ಮತ್ತೊಂದು ಬ*




