ಮದುವೆ ಆಗಿ 3 ತಿಂಗಳಿಗೆ ನವ ವಿವಾಹಿತೆ ಸಾವು – ಗಂಡನ ಎದುರೇ ಜೀವಂತ ಜಲಸಮಾಧಿಯಾದ ಪತ್ನಿ

ಮದುವೆಯಾಗಿ ಕೇವಲ 3ತಿಂಗಳು. ಹೊ ಸಬಾಳಿನ ಕನಸು ಕಂಡಿದ್ದವಳು. ಆಷಾಢ ಮುಗಿಸಿ ತವರು ಮನೆಯಿಂದ ಗಂಡನ ಮನೆಗೆ ಸಂಭ್ರಮದಿಂದ ಹೊರಟಿದ್ದ ನವವಿವಾಹಿತೆ. ಆದ್ರೆ ವಿಧಿಯ ಅಟ್ಟಹಾಸಕ್ಕೆ ಮಾರ್ಗಮಧ್ಯದಲ್ಲೇ ಜಲಸಮಾಧಿಯಾಗಿರೋ ದಾರುಣ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಇದನ್ನು ಓದಿ : ಸೆಲ್ಫಿ ತೆಗೆದುಕೊಳ್ಳಲು ಹೋಗಿ ಐವರು ಜಲಸಮಾಧಿ!

ಗಂಡನ ಎದುರೇ ಜೀವಂತ ಜಲಸಮಾಧಿ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪತ್ತೇಪುರ ಗ್ರಾಮದ ಕರೆಪ್ಪ ಯಾಳಗಿ ಹಾಗೂ ರೇಣುಕಾ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ರು. ರೇಣುಕಾ ಆಷಾಢ ಆಚರಣೆಗೆ ತವರು ಮನೆಗೆ ಬಂದಿದ್ದು, ಆಷಾಢ ಮುಗಿಸಿಕೊಂಡು ಗಂಡನ ಜೊತೆ ಗಂಡನ ಮನೆಗೆ ತೆರಳುತ್ತಿದ್ದರು.

ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪುರ ಎಡದಂಡೆ ಕಾಲುವೆ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಬೈಕ್ನ ಹ್ಯಾಂಡಲ್ ಏಕಾಏಕಿ ನಿಯಂತ್ರಣ ತಪ್ಪಿದೆ. ಬೈಕ್ ಸಮೇತ ನವ ದಂಪತಿ ಆಳವಾದ ಕಾಲುವೆಗೆ ಉರುಳಿ ಬಿದ್ದಿದ್ದಾರೆ. ಕಾಲುವೆಗೆ ಬಿದ್ದ ಕೂಡಲೇ ಪತಿ ಕರೆಪ್ಪ ಯಾಳಗಿ ಧೈರ್ಯದಿಂದ ಈಜಾಡಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ರೆ, ರಭಸವಾಗಿ ಹರಿಯುತ್ತಿದ್ದ ನೀರಿನ ಸೆಳೆತಕ್ಕೆ ಸಿಲುಕಿದ ನವವಧು ರೇಣುಕಾ ಕೊಚ್ಚಿ ಹೋಗಿದ್ದು, ಪತಿಯ ಕಣ್ಣೆದುರೇ ಜಲಸಮಾಧಿಯಾಗಿದ್ದಾಳೆ.

3 ತಿಂಗಳಿಗೆ ನವ ವಿವಾಹಿತೆ ಸಾವು – ಮೃತದೇಹಕ್ಕಾಗಿ ತೀವ್ರ ಶೋಧ ಕಾರ್ಯ
ಇನ್ನು ಕೆಂಭಾವಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಜುಗಾರರ ನೆರವಿನಿಂದ ಕಾಲುವೆಯಲ್ಲಿ ರೇಣುಕಾ ಮೃತದೇಹಕ್ಕಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

ಇದನ್ನು ನೋಡಿ : ಸರ್ಕಾರಿ ಸಾರಿಗೆ ಬಸ್ಗಳ ನಡುವೆ ಭೀಕರ ಅಪಘಾ*- ಇಬ್ಬರು ಚಾಲಕರು ಸಾ*, 10 ಮಂದಿಗೆ ಗಾಯ




