Mandya : ಫೋಟೋ ತೆಗೆಯಲು ಹೋಗಿ ಒಂದೇ ಕುಟುಂಬದ ಐವರು ಜಲಸಮಾಧಿ – ಸರ್ಕಾರದಿಂದ ಪರಿಹಾರ ನೀಡುವಂತೆ ಒತ್ತಾಯ

ಮುತ್ತತ್ತಿ ಆಂಜನೇಯನ ದರ್ಶನ ಮಾಡಿ ಸೆಲ್ಫಿ ತೆಗೆದುಕೊಳ್ಳಲು ನೀರಿಗಿಳಿದ ಐವರು ಸಾವನ್ನಪ್ಪಿರುವ ದಾರುಣ ಘಟನೆ Mandya ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಯಲ್ಲಿ ನಡೆದಿದೆ.
ಒಂದೇ ಕುಟುಂಬದ ಐವರು ದಾರುಣ ಸಾವು
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಜೆ.ಬ್ಯಾಡರಹಳ್ಳಿ ಗ್ರಾಮದ 38 ವರ್ಷದ ಶ್ವೇತಾ, ಅವರ ಪುತ್ರಿ 19 ವರ್ಷದ ಚೈತ್ರಾ, ಅವರ ಅತ್ತಿಗೆ 52 ವರ್ಷದ ವಿಜಯಲಕ್ಷ್ಮಿ, ಅತ್ತಿಗೆ ಮಗಳು 28 ವರ್ಷದ ಪ್ರಿಯಾಂಕ ಹಾಗೂ ಬೆಂಗಳೂರಿನ ಕಾರು ಚಾಲಕ 38 ವರ್ಷದ ಮಹೇಶ್ ಮೃತಪಟ್ಟಿದ್ದಾರೆ. ಒಂದು ದಿನದ ಪ್ರವಾಸಕ್ಕೆ ಬಂದಿದ್ದ ಏಳು ಮಂದಿಯಲ್ಲಿ ಶ್ವೇತಾ ಅವರ ಪತಿ ರವಿ ಮತ್ತು ಪ್ರಿಯಾಂಕಾ ಅವರ 2 ವರ್ಷದ ಮಗು ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಗಿದ್ದೇನು..?
ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಶ್ವೇತಾ ಅವರ ಕುಟುಂಬಸ್ಥರು,ಬುಧವಾರ ಬೆಳಿಗ್ಗೆ ಬಾಡಿಗೆ ಕಾರಿನಲ್ಲಿ ಬೆಂಗಳೂರಿನಿಂದ ಹೊರಟು ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮಕ್ಕೆ ಬೀಗರ ಊಟಕ್ಕೆ ಹೋಗಿದ್ದರು. ಅಲ್ಲಿಂದ ಮುತ್ತತ್ತಿಗೆ ಪ್ರವಾಸಕ್ಕೆಂದು ಸಂಜೆ 4 ಗಂಟೆಗೆ ಬಂದಿದ್ದರು.
ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ, ಕಾವೇರಿ ನದಿಯ ನೀರಿನಲ್ಲಿ ಸೆಲ್ಪಿ ತೆಗೆದುಕೊಳ್ಳುವಾಗ ಶ್ವೇತಾ ಅವರು ಮೊದಲು ನೀರಿನಲ್ಲಿ ಸಿಲುಕಿದ್ದಾರೆ. ಅವರನ್ನು ರಕ್ಷಿಸಲು ಹೋದ ಇತರ ನಾಲ್ವರು ಕೂಡ ನೀರು ಪಾಲಾಗಿದ್ದಾರೆ. ಮೃತರು ಸಾವಿಗೂ ಮುನ್ನ ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು,ಈ ದೃಶ್ಯ ಮನಕಲುಕುವಂತಿದೆ.
ಇದನ್ನು ಓದಿ : ಭೀಕರ ರಸ್ತೆ ಅಪಘಾತ ಮೂವರು ಯುವಕರು ಸ್ಥಳದಲ್ಲೇ ಸಾವು..!!

ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ, ಪರಿಶೀಲನೆ
ನುರಿತ ಈಜುಗಾರರ ನೆರವಿನಿಂದ 5 ಮೃತದೇಹಗಳನ್ನು ಸಂಜೆ ವೇಳೆಗೆ ಹೊರತೆಗೆಯಲಾಗಿದೆ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವರ ದರ್ಶನಕ್ಕೆಂದು ಹೋದವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋದು ದುರಂತವೇ ಸರಿ.

ಇದನ್ನು ನೋಡಿ : ನಟಿ KRISHI THAPANDA ಮನೆಯಲ್ಲಿ ಗೆಳೆಯ VAISHAK ಆತ್ಮಹ* .!




