ಟೋಲ್ ಸಂಗ್ರಹ ವಿರೋಧಿಸಿ ಹಾಗೂ ರೈತರ ವಾಹನಗಳಿಗೆ Toll ವಿನಾಯಿತಿ ನೀಡುವಂತೆ ಆಗ್ರಹಿಸಿ ಜೂನ್ 23ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಕರೆ ನೀಡಿದೆ.

ರಾಜ್ಯದ ಹೆದ್ದಾರಿಗಳಲ್ಲಿ Toll ಸಂಗ್ರಹ ವಿರೋಧಿಸಿ ಹಾಗೂ ರೈತರ ವಾಹನಗಳಿಗೆ ಟೋಲ್ ಸುಂಕದಿಂದ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ,
ಜೂನ್ 23ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಕರೆ ನೀಡಿದೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದ್ದು, ರಾಜ್ಯದ ವಿವಿಧ ಟೋಲ್ ಬೂತ್ಗಳ ಮುಂದೆ ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ರೈತರ ಪ್ರಮುಖ ಬೇಡಿಕೆಗಳು
ರೈತರು ಬೆಳೆಯುವ ಕಬ್ಬು, ತರಕಾರಿ ಮತ್ತು ಹಣ್ಣುಗಳನ್ನು ಸಾಗಿಸುವ ಕೃಷಿ ವಾಹನಗಳ ಮೇಲೆ ಟೋಲ್ ಸುಂಕ ವಿಧಿಸುವುದರಿಂದ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಸಂಘ ಆರೋಪಿಸಿದೆ.
ವಾಹನ ಖರೀದಿ ವೇಳೆ ರಸ್ತೆ ತೆರಿಗೆ ಪಾವತಿಸಿರುವಾಗ ಮತ್ತೆ ಟೋಲ್ ವಸೂಲಿ ಮಾಡುವುದು ಸರಿಯಲ್ಲ.
ಆದ್ದರಿಂದ ಕೃಷಿ ಉತ್ಪನ್ನ ಸಾಗಿಸುವ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು ಹಾಗೂ ರಾಜ್ಯದ ಟೋಲ್ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಲಾಗಿದೆ.

ಪಂಜಾಬ್ ಮಾದರಿ ಜಾರಿಗೆ ಒತ್ತಾಯ
ಕರ್ನಾಟಕದಲ್ಲೂ ಪಂಜಾಬ್ನಲ್ಲಿ ಜಾರಿಯಲ್ಲಿರುವ ಟೋಲ್ ಸುಂಕ ಮಾದರಿಯನ್ನು ಅನುಸರಿಸಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ಜೊತೆಗೆ, ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬಾಕಿ ಇರುವ ಕಬ್ಬಿನ ಹಣವನ್ನು ಕೂಡಲೇ ಪಾವತಿಸುವಂತೆ ಸರ್ಕಾರವನ್ನು ಆಗ್ರಹಿಸಿದೆ.
MUST READ : Guru Pushya Mahayoga : ಈ 6 ರಾಶಿಗಳಿಗೆ ಅದೃಷ್ಟ, ಧನಲಾಭ ಮತ್ತು ಯಶಸ್ಸಿನ ಸುರಿಮಳೆ..!!

ಜೂನ್ 23ರಂದು ರಾಜ್ಯಾದ್ಯಂತ ಪ್ರತಿಭಟನೆ
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂನ್ 23ರಂದು ರಾಜ್ಯದ ಎಲ್ಲಾ ಪ್ರಮುಖ ಟೋಲ್ ಬೂತ್ಗಳ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವ ಸಾಧ್ಯತೆ ಇದೆ.
MUST WATCH : ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು – HIGHWAY ತಡೆದು ಅನ್ನದಾತರ ಆಕ್ರೋಶ.! | CHIKKABALLAPURA NEWS |




