ಬೆಂಗಳೂರು ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವಿಗೆ ಜುಲೈ 1ರವರೆಗೆ ಗಡುವು ನೀಡಲಾಗಿದೆ. ಗಡುವಿನ ಬಳಿಕ ನಿಯಮ ಉಲ್ಲಂಘಿಸಿದವರಿಗೆ ₹250 ರಿಂದ ₹10,000 ವರೆಗೆ ದಂಡ ಹಾಗೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ Krishna Byre Gowda ತಿಳಿಸಿದ್ದಾರೆ.

ನಗರದಲ್ಲಿ ಪಾದಚಾರಿಗಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಫುಟ್ಪಾತ್ ಒತ್ತುವರಿ ತೆರವು ಅಭಿಯಾನವನ್ನು ವೇಗಗೊಳಿಸಲಾಗಿದೆ.
ಸುಮಾರು 2,000 ಕಿಲೋಮೀಟರ್ ರಸ್ತೆಗಳನ್ನು ಆದ್ಯತೆಯ ಮೇರೆಗೆ ಗುರುತಿಸಿ “ಸುರಕ್ಷಿತ ಪಾದಚಾರಿ ಅಭಿಯಾನ”ವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ Krishna Byre Gowda ತಿಳಿಸಿದ್ದಾರೆ.
ನಗರದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಫುಟ್ಪಾತ್ ಒತ್ತುವರಿ ಮಾಡಿಕೊಂಡಿರುವವರಿಗೆ ಜುಲೈ 1ರವರೆಗೆ ಗಡುವು ನೀಡಲಾಗಿದೆ.
ಈ ಅವಧಿಯೊಳಗೆ ಸ್ವಯಂಪ್ರೇರಿತವಾಗಿ ಒತ್ತುವರಿ ತೆರವುಗೊಳಿಸದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
MUST READ : ಜನಸಾಮಾನ್ಯರಿಗೆ ಶಾಕ್ – ಬೆಂಗಳೂರಲ್ಲಿ ತರಕಾರಿ ಬೆಲೆಯಲ್ಲಿ ಭಾರಿ ಏರಿಕೆ

ಜುಲೈ 1 ಬಳಿಕ ಭಾರೀ ದಂಡ
ಸಚಿವರು ಘೋಷಿಸಿರುವ ಹೊಸ ನಿಯಮಗಳ ಪ್ರಕಾರ, ಜುಲೈ 1ರ ನಂತರವೂ ಫುಟ್ಪಾತ್ ಒತ್ತುವರಿ ಮುಂದುವರಿದರೆ ₹250ರಿಂದ ₹10,000ವರೆಗೆ ದಂಡ ವಿಧಿಸಲಾಗುತ್ತದೆ.
ಪಾದಚಾರಿ ಮಾರ್ಗಗಳ ಮೇಲೆ ಜಾಹೀರಾತು ಫಲಕಗಳು ಅಥವಾ ವ್ಯಾಪಾರಿಕ ವಸ್ತುಗಳನ್ನು ಇಡುವವರ ಮೇಲೂ ದಂಡಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ.
ಫುಟ್ಪಾತ್ಗಳನ್ನು ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವ ಅಂಗಡಿಗಳ ವಿರುದ್ಧವೂ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಒತ್ತುವರಿ ತೆರವುಗೊಳಿಸದ ಅಂಗಡಿಗಳ ಪರವಾನಿಗೆಗಳನ್ನು ರದ್ದುಪಡಿಸುವ ಸಾಧ್ಯತೆಯಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಫುಟ್ಪಾತ್ನಲ್ಲಿ ವಾಹನ ನಿಲುಗಡೆಗೆ ನಿರ್ಬಂಧ
ಪಾದಚಾರಿ ಮಾರ್ಗಗಳಲ್ಲಿ ವಾಹನಗಳನ್ನು ನಿಲ್ಲಿಸುವುದಕ್ಕೂ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಫುಟ್ಪಾತ್ನಲ್ಲಿ ಪಾರ್ಕ್ ಮಾಡಿರುವ ವಾಹನಗಳನ್ನು ಟೋಯಿಂಗ್ ಮೂಲಕ ತೆರವುಗೊಳಿಸಲಾಗುವುದು.
ಇದರಿಂದ ಪಾದಚಾರಿಗಳಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ರಸ್ತೆ ಬದಿ ಮತ್ತು ಫುಟ್ಪಾತ್ಗಳಲ್ಲಿ ದೀರ್ಘಕಾಲದಿಂದ ನಿಲ್ಲಿಸಿರುವ ವಾರಸುದಾರರಿಲ್ಲದ ವಾಹನಗಳ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ. ಜುಲೈ 1ರಿಂದ ಅಂತಹ ವಾಹನಗಳಿಗೆ ಸ್ಟಿಕರ್ ಅಂಟಿಸಿ ನೋಟಿಸ್ ನೀಡಲಾಗುತ್ತದೆ. ಬಳಿಕ ಜುಲೈ 10ರವರೆಗೆ ವಾಹನಗಳನ್ನು ತೆರವುಗೊಳಿಸದಿದ್ದರೆ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದು ಹರಾಜು ಪ್ರಕ್ರಿಯೆ ಆರಂಭಿಸಲಿದ್ದಾರೆ.

ಬಸ್ ನಿಲ್ದಾಣಗಳಿಗೂ ಹೊಸ ನಿಯಮ
ನಗರ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಸಿಗ್ನಲ್ಗಳಿಂದ 75 ಮೀಟರ್ ವ್ಯಾಪ್ತಿಯೊಳಗೆ ಬಸ್ ನಿಲ್ದಾಣಗಳು ಇರಬಾರದು ಎಂಬ ಹೊಸ ನಿಯಮವನ್ನೂ ಘೋಷಿಸಲಾಗಿದೆ. ಈ ಕ್ರಮದಿಂದ ವಾಹನ ದಟ್ಟಣೆ ಕಡಿಮೆ ಮಾಡಿ ಸಂಚಾರ ಸುಗಮಗೊಳಿಸುವ ಗುರಿ ಹೊಂದಲಾಗಿದೆ.
ಬೆಂಗಳೂರು ನಗರದಲ್ಲಿ ಫುಟ್ಪಾತ್ಗಳನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿಸುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿರುವ ಈ ಅಭಿಯಾನಕ್ಕೆ ಸಾರ್ವಜನಿಕರು ಸಹಕರಿಸುವಂತೆ ನಗರಾಭಿವೃದ್ಧಿ ಇಲಾಖೆ ಮನವಿ ಮಾಡಿದೆ.
MUST WATCH : ಜೂ 28ರಿಂದ ಪಲ್ಸ್ ಪೋಲಿಯೋ ಅಭಿಯಾನ ತುಮಕೂರಿನಲ್ಲಿ ಕ್ಯಾಂಪೇನ್ಗೆ ಫುಲ್ ಪ್ರಿಪರೇಷನ್




