Mandya ದಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ ತಂದೆ-ತಾಯಿ ಮಗನ ಕೇಸ್ಗೆ ಟ್ವಿಸ್ಟ್.

Mandya ಜಿಲ್ಲೆಯ ನೆಹರು ನಗರದಲ್ಲಿ ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ರಾತ್ರಿ ಜ್ಯೋತಿ ಮತ್ತು ಸಂತೋಷ್ ಮನೆಯಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇಂದು ಬೆಳಿಗ್ಗೆ ಪ್ರಭಾಕರ್ ಅವರು ತಮ್ಮ ಬಟ್ಟೆ ಅಂಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ರು.
ಡೆತ್ ನೋಟ್ನಲ್ಲಿ ಏನಿದೆ..?
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಡೆತ್ ನೋಟ್ ಒಂದು ಪತ್ತೆಯಾಗಿದೆ. ಡೆತ್ ನೋಟ್ ನಲ್ಲಿ ಆಶ್ಚರ್ಯಕರವಾದ ಮಾಹಿತಿ ಪತ್ತೆಯಾಗಿದೆ. ಡೆತ್ ನೋಟ್ನಲ್ಲಿ ಶಕ್ತಿ ಯೋಜನೆಯ ಪರಿಣಾಮದಿಂದ ಬಟ್ಟೆ ವ್ಯಾಪಾರ ಕುಸಿತಗೊಂಡಿದ್ದು, ಸಾಲ ಹೆಚ್ಚಾಗಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ನನ್ನ ಹೆಂಡತಿಯನ್ನು ಕೊಲೆ ಮಾಡಿ ನಂತರ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ದು ಪ್ರಭಾಕರ್ ಬರೆದಿದ್ದಾರೆ.
ಇದನ್ನು ಓದಿ : ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ಸಾವು!

ಮಗನ ಸಾವಿನ ಬಗ್ಗೆ ಅನುಮಾನ
ಆದರೆ ಮಗನ ಸಾವಿನ ಕುರಿತು ಡೆತ್ ನೋಟ್ನಲ್ಲಿ ಮಾಹಿತಿ ಇಲ್ಲದಿರುವುದರಿಂದ, ಮಗ ಮತ್ತು ಪತ್ನಿಯನ್ನು ಕೊಲೆ ಮಾಡಿ ನಂತರ ತಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನಗಳು ವ್ಯಕ್ತವಾಗಿವೆ. ಆದರೆ ಈ ಬಗ್ಗೆ ಪೊಲೀಸರು ಇನ್ನೂ ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ.
ಅತ್ತೆ ಹಾಗೂ ಗಂಡನ ಮೃತದೇಹ ಪತ್ತೆ – Mandya
ಇನ್ನು ಮನೆಯಲ್ಲಿಯೇ ಇದ್ದಂತಹ ಸೊಸೆಗೆ ಈ ವಿಚಾರ ಗೊತ್ತೇ ಇಲ್ಲ ಇಂದು ಬೆಳಿಗ್ಗೆ 8 ಗಂಟೆ ಆದರೂ ಕೂಡ ಅತ್ತೆ ಹಾಗು ತನ್ನ ಗಂಡ ರೂಮಿನಿಂದ ಆಚೆ ಬರಲಿಲ್ಲವೋ, ಆ ಸಂದರ್ಭದಲ್ಲಿ ರೂಮಿಗೆ ಹೋಗಿ ನೋಡಿದಾಗ ಅತ್ತೆ ಹಾಗೂ ಗಂಡನ ಮೃತದೇಹ ಪತ್ತೆಯಾಗಿದೆ.

Mandya ಪಶ್ಚಿಮ ಪೊಲೀಸ್ ಠಾಣೆ ಅದಿಕಾರಿಗಳಿಂದ ತನಿಖೆ
ಘಟನಾ ಸ್ಥಳಕ್ಕೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : BAR,PUB, CLUBಗಳಿಗೆ ಹೊಸ RULES – ಇನ್ಮುಂದೆ ID ಇಲ್ಲದಿದ್ರೆ ENTRY ಇಲ್ಲ..!





