
Mandya : ಕಸದ ತೊಟ್ಟಿಯಲ್ಲಿ ಕಂದಾಯ ಇಲಾಖೆ ಕಡತಗಳು – ಭ್ರಷ್ಟಾಚಾರ ಬಯಲಾಗುವ ಭಯಕ್ಕೆ ದಾಖಲೆ ಎಸೆದ್ರಾ..?
ರೈತರ ಜಮೀನಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನ ಕಸದ ತೊಟ್ಟಿಗೆ ಎಸೆದಿರುವ ಘಟನೆ Mandya ಜಿಲ್ಲೆಯ ನಾಗಮಂಗಲದಲ್ಲಿ ಬೆಳಕಿಗೆ ಬಂದಿದೆ. ನಾಗಮಂಗಲ ಪಟ್ಟಣದ ತಾಲೂಕು ಕಚೇರಿ ಪಕ್ಕದ ಕಸದ ತೊಟ್ಟಿಯಲ್ಲಿ ಕಂದಾಯ ಇಲಾಖೆಗೆ ಸೇರಿದ ರೈತರ ಜಮೀನಿಗೆ ಸಂಬಂಧಿಸಿದ RTC, MR, INDEX ಸೇರಿದಂತೆ ಹಲವು ದಾಖಲೆಗಳ ಕಡತಗಳು ಪತ್ತೆಯಾಗಿದ್ದು, ಸಂರಕ್ಷಿಸಿ ಇಡಬೇಕಾದ ಹಳೆಯ ದಾಖಲೆಗಳನ್ನೇ ಸಿಬ್ಬಂದಿ ಕಸದ ತೊಟ್ಟಿಗೆ ಎಸೆದಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಇದನ್ನ ಕಂಡ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
READ THIS : ಸುಡೋ ನಕ್ಸಲ್ ವೆಂಕಟೇಶ್ ಬಂಧನ – ಹೇಗಿತ್ತು ಗೊತ್ತಾ ಪೊಲೀಸರ ಆಪರೇಷನ್?

ಭ್ರಷ್ಟಾಚಾರ ಬಯಲಾಗುವ ಭಯಕ್ಕೆ ದಾಖಲೆ ಎಸೆದ್ರಾ?
ಇನ್ನು ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿ ಸುರಕ್ಷಿತವಾಗಿ ಇಡಬೇಕಿದ್ದ ದಾಖಲೆಗಳು ಕಸದ ತೊಟ್ಟಿಯಲ್ಲಿ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರೈತರ ಮೂಲ ಜಮೀನಿನ ದಾಖಲೆಗಳನ್ನ ಈ ರೀತಿ ನಿರ್ಲಕ್ಷ್ಯವಾಗಿ ಬಿಸಾಡಿದ್ದು ಯಾಕೆ ಅನ್ನೋ ಪ್ರಶ್ನೆ ಇದೀಗ ಎದುರಾಗಿದೆ. ಅಲ್ದೇ ಕಂದಾಯ ಇಲಾಖೆಯ ಅಕ್ರಮ ಹಾಗೂ ಭ್ರಷ್ಟಾಚಾರದ ದಾಖಲೆಗಳು ಬಯಲಿಗೆ ಬರುತ್ತವೆ ಅನ್ನೋ ಭಯದಿಂದಲೇ ಕಡತಗಳನ್ನ ಕಸದ ತೊಟ್ಟಿಗೆ ಎಸೆದಿರಬಹುದು ಎಂಬ ಆರೋಪವೂ ಕೇಳಿಬಂದಿದೆ.

Mandya – ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ
ರೈತರ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಕಸದ ತೊಟ್ಟಿಯಲ್ಲಿ ಪತ್ತೆಯಾಗಿರೋದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ದೇ ದಾಖಲೆಗಳನ್ನ ನಿರ್ಲಕ್ಷ್ಯ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅನ್ನೋ ಒತ್ತಾಯವೂ ಕೇಳಿಬಂದಿದೆ.

MUST WATCH : HOSTELಗೆ CM ದಿಢೀರ್ VISIT – ಮಕ್ಕಳೊಟ್ಟಿಗೆ ಕುಳಿತು DK ಊಟ




