
ಸೂರ್ಯ-ಜ್ಯೋತಿಕಾ 20 ನೇ ವಿವಾಹ ವಾರ್ಷಿಕೋತ್ಸವ – ಮತ್ತೆ ಮದುವೆಯಾದ ತಾರಾ ಜೋಡಿ
ತಮಿಳು ಚಿತ್ರರಂಗದ ಜನಪ್ರಿಯ ಹಾಗೂ ಮಾದರಿ ದಂಪತಿ ಎಂದೇ ಗುರುತಿಸಿಕೊಂಡಿರುವ ಸ್ಟಾರ್ ನಟ ಸೂರ್ಯ ಮತ್ತು ನಟಿ ಜ್ಯೋತಿಕಾ, ತಮ್ಮ 20ನೇ ವಿವಾಹ ವಾರ್ಷಿಕೋತ್ಸವವನ್ನು ವಿಭಿನ್ನವಾಗಿ ಹಾಗೂ ರೊಮ್ಯಾಂಟಿಕ್ ಆಗಿ ಆಚರಿಸಿಕೊಂಡಿದ್ದಾರೆ.

ಮತ್ತೆ ಮದುವೆಯಾದ ಸ್ಟಾರ್ ಜೋಡಿ
20 ವರ್ಷಗಳ ದಾಂಪತ್ಯ ಜೀವನದ ಸಂಭ್ರಮವನ್ನು ಮತ್ತಷ್ಟು ವಿಶೇಷವಾಗಿಸಲು ಈ ಜೋಡಿ ವಿದೇಶದ ಚರ್ಚ್ವೊಂದರಲ್ಲಿ ಮತ್ತೊಮ್ಮೆ ಮದುವೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಸೂರ್ಯ ಸೂಟ್ ಧರಿಸಿ ಮಿಂಚಿದ್ದು ಜ್ಯೋತಿಕಾ ಬಿಳಿ ಬಣ್ಣದ ವೆಡ್ಡಿಂಗ್ ಗೌನ್ನಲ್ಲಿ ಕಂಗೊಳಿಸಿದ್ದಾರೆ. ದಂಪತಿಯ ಮಕ್ಕಳಾದ ದಿಯಾ ಮತ್ತು ದೇವ್ ಕೂಡ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಮದುವೆಯ ವಿಧಿವಿಧಾನಗಳಲ್ಲಿ ತಂದೆ-ತಾಯಿಯೊಂದಿಗೆ ಭಾಗಿಯಾಗಿದ್ದಾರೆ.
READ THIS : ನವೆಂಬರ್ 10ಕ್ಕೆ ಅನಿರುದ್ಧ್ – ಕಾವ್ಯಾ ಮಾರನ್ ಮದುವೆ?

ಇದು ಯಾವುದೇ ಪರಿಪೂರ್ಣ ಮದುವೆಯ ಆಚರಣೆಯಲ್ಲ
ಈ ಸುಂದರ ಕ್ಷಣಗಳ ವಿಡಿಯೋವನ್ನು ಜ್ಯೋತಿಕಾ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ 20 ವರ್ಷಗಳ ಪ್ರೀತಿ ಮತ್ತು ಜಗಳದ ಪಯಣದ ಸಂಭ್ರಮವಿದು. ಇದು ಯಾವುದೇ ಪರಿಪೂರ್ಣ ಮದುವೆಯ ಆಚರಣೆಯಲ್ಲ, ಬದಲಿಗೆ ನಮ್ಮ ನಡುವಿನ ಸಣ್ಣಪುಟ್ಟ ಕೊರತೆಗಳು, ಹೊಂದಾಣಿಕೆಗಳು, ಅರ್ಥಮಾಡಿಕೊಳ್ಳುವಿಕೆ, ತ್ಯಾಗ ಹಾಗೂ ಪರಸ್ಪರ ತೋರಿದ ನಿಸ್ವಾರ್ಥ ಪ್ರೀತಿಯ ಆಚರಣೆ. ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ನಾವು ಬೆಳೆದುಬಂದ ಹಾದಿಯ ಸಂಭ್ರಮವಿದು’ ಎಂದು ಅತ್ಯಂತ ಭಾವುಕವಾಗಿ ಬರೆದುಕೊಂಡಿದ್ದಾರೆ.

ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್
ಸೂರ್ಯ–ಜ್ಯೋತಿಕಾ ಅವರ ಮದುವೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ದಂಪತಿಗೆ 20 ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರುತ್ತಿದ್ದಾರೆ.
MUST WATCH : ಹಬ್ಬದ ದಿನವೇ ಘೋರ ದುರಂತ – ಕಾರು ಹರಿದು ಬಾಲಕ ಸ್ಥಳದಲ್ಲೇ ಸಾ*





