ನ.10 ಕ್ಕೆ ಅನಿರುದ್ಧ್-ಕಾವ್ಯಾ ಮಾರನ್ ಮದುವೆ?

ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಪುತ್ರಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಕಾವ್ಯಾ ಮಾರನ್ ಮತ್ತು ಖ್ಯಾತ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಮದುವೆ ಕುರಿತ ವದಂತಿಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ನವೆಂಬರ್ 10 ರಂದು ಗ್ರೀಸ್ನಲ್ಲಿ ಇಬ್ಬರೂ ವಿವಾಹವಾಗಲಿದ್ದಾರೆ ಎಂಬ ಮಾತುಗಳು ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿವೆ.
ಅನಿರುದ್ಧ್ – ಕಾವ್ಯಾ ಮಾರನ್ ಮದುವೆ ಫಿಕ್ಸ್?
ಆದರೆ, ಈ ಮದುವೆ ಕುರಿತಂತೆ ಕಾವ್ಯಾ ಮಾರನ್ ಅಥವಾ ಅನಿರುದ್ಧ್ ರವಿಚಂದರ್ ಅವರಿಂದ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ನವೆಂಬರ್ 10ರ ಮದುವೆ ಸುದ್ದಿ ಸದ್ಯಕ್ಕೆ ವದಂತಿ ಅಥವಾ ಮೂಲಗಳ ಹೇಳಿಕೆಗೆ ಸೀಮಿತವಾಗಿದೆ.
READ THIS : ಪಾಕ್ ಆಟಗಾರನ ಖರೀದಿಸಿದ Kavya Maran – ಭಾರೀ ಆಕ್ರೋಶ..!

“ಶೀಘ್ರದಲ್ಲೇ ಅನಿರುದ್ಧ್ ಮದುವೆಯಾಗಲಿದ್ದಾರೆ”
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅನಿರುದ್ಧ್ ಅವರ ಚಿಕ್ಕಪ್ಪ ಹಾಗೂ ಹಿರಿಯ ನಟ ವೈ.ಜಿ. ಮಹೇಂದ್ರನ್ ಅವರು, ಅನಿರುದ್ಧ್ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬರ್ಥದ ಹೇಳಿಕೆ ನೀಡಿದ್ದರು. “ಶೀಘ್ರದಲ್ಲೇ ಅನಿರುದ್ಧ್ ಮದುವೆಯಾಗಲಿದ್ದಾರೆ” ಎಂಬ ಅವರ ಹೇಳಿಕೆ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಇಬ್ಬರ ಸಂಬಂಧಕ್ಕೆ ಕುಟುಂಬದವರಿಂದ ಗ್ರೀನ್ ಸಿಗ್ನಲ್?
ಕಳೆದ ಒಂದು ವರ್ಷದಿಂದ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ನಡುವೆ ಆತ್ಮೀಯ ಸಂಬಂಧವಿದೆ ಎಂಬ ವದಂತಿಗಳು ಕೇಳಿಬರುತ್ತಿವೆ. ಇಬ್ಬರೂ ವಿದೇಶದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂಬ ವರದಿಗಳೂ ಈ ಹಿಂದೆ ಹರಿದಾಡಿದ್ದವು. ಕುಟುಂಬದವರ ಒಪ್ಪಿಗೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಈ ಕುರಿತು ಅಧಿಕೃತ ದೃಢೀಕರಣವಿಲ್ಲ.

MUST WATCH : ED ರೇಡ್ಗೆ ಆರ್ ಅಶೋಕ್ ಹ್ಯಾಪಿ – ರೇಡ್ನಿಂದ ದುಡ್ಡು ವಾಪಸ್ ಬರುತ್ತೆ ಅಂದ್ರು.!




