ಕಾವೇರಿ ನದಿಗೆ ಹಾರಿ ಯುವತಿ Suicide – ಆಗಿದ್ದೇನು?

ತಾಯಿಯ ಕಣ್ಣೆದುರೇ ಯುವತಿಯೊಬ್ಬಳು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂ ಬಳಿ ನಡೆದಿದೆ. ಮೈಸೂರಿನ ರಾಮಕೃಷ್ಣ ನಗರದ ನಿವಾಸಿ ಕುಸುಮಾಂಜಲಿ (24) ಮೃತ ಯುವತಿ ಎಂದು ಗುರುತಿಸಲಾಗಿದೆ. ತಾಯಿಯೊಂದಿಗೆ ಕೆಆರ್ಎಸ್ಗೆ ಬಂದಿದ್ದ ಕುಸುಮಾಂಜಲಿ, ಸೇತುವೆ ಮೇಲಿಂದ ಏಕಾಏಕಿ ಕಾವೇರಿ ನದಿಗೆ ಧುಮುಕಿದ್ದಾಳೆ.
READ THIS : ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವತಿ Suicide!

ತಾಯಿಯ ಕಣ್ಣೆದುರೇ ಯುವತಿ Suicide.!
ಮಗಳು ನದಿಗೆ ಹಾರಿದ್ದನ್ನು ಕಣ್ಣಾರೆ ಕಂಡ ತಾಯಿ, ಮಗಳನ್ನು ಬದುಕಿಸುವಂತೆ ಸ್ಥಳದಲ್ಲೇ ಕಣ್ಣೀರಿಡುತ್ತಾ ಅಂಗಲಾಚಿದ್ದಾರೆ. ಸ್ಥಳದಲ್ಲಿದ್ದ ಕೆಲವರು ಸಹಾಯಕ್ಕೆ ಮುಂದಾದರೂ ನದಿಯ ನೀರಿನ ಪರಿಸ್ಥಿತಿ ಕಂಡು ನೀರಿಗೆ ಇಳಿಯಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ತಾಯಿಯ ಕಣ್ಣೆದುರೇ ಮಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.
ಕೆ.ಆರ್.ಎಸ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಹೊರತೆಗೆಯಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ಘಟನೆ ಕೆ.ಆರ್.ಎಸ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

MUST WATCH : ಖರ್ಗೆ ಕಾರ್ಯಕ್ರಮದ ಸ್ಥಳ ಶುದ್ಧೀಕರಣ – ಹಾಸನದಲ್ಲಿ ಕಾಂಗ್ರೆಸ್ ಪ್ರತಿಭಟನೆ.!




