ಮೊಬೈಲ್ ಬಳಸಬೇಡ ಎಂದು ತಾಯಿ ಬುದ್ಧಿವಾದ – ವಿದ್ಯಾರ್ಥಿನಿ Suicide

ಹೆಚ್ಚು ಮೊಬೈಲ್ ಬಳಸಬೇಡ, ರೀಲ್ಸ್ ನೋಡುವುದನ್ನು ಕಡಿಮೆ ಮಾಡು ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಕೊಟಬಾಗಿ ಗ್ರಾಮದ ಮೇಘಾ ಗುಬ್ಬಣ್ಣವರ್ (20) ಎಂದು ಗುರುತಿಸಲಾಗಿದೆ. ಮೇಘಾ ಧಾರವಾಡದ ಖಾಸಗಿ ಕಾಲೇಜಿನಲ್ಲಿ ಡಿ.ಇಡಿ ವ್ಯಾಸಂಗ ಮಾಡುತ್ತಿದ್ದಳು.
ಇದನ್ನು ಓದಿ : ಸಾಲಬಾಧೆ ತಾಳಲಾರದೇ ನದಿಗೆ ಬಿದ್ದು ರೈತ Suicide!

ಬುದ್ಧಿ ಹೇಳಿದಕ್ಕೆ ಯುವತಿ Suicide!
ಮೇಘಾ ಹೆಚ್ಚು ಸಮಯ ಮೊಬೈಲ್ ಬಳಸುತ್ತಿದ್ದು, ನಿರಂತರವಾಗಿ ರೀಲ್ಸ್ ನೋಡುತ್ತಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯ ತಾಯಿ ಮೊಬೈಲ್ ಬಳಕೆ ಕಡಿಮೆ ಮಾಡುವಂತೆ ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದ ಮೇಘಾ ವಿಷ ಸೇವಿಸಿದ್ದಾಳೆ ಎನ್ನಲಾಗಿದೆ. ವಿಷ ಸೇವಿಸಿದ್ದ ಮೇಘಾಳನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.
ದೂರು ದಾಖಲು
ಘಟನೆಗೆ ಸಂಬಂಧಿಸಿದಂತೆ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನು ನೋಡಿ : ವೆಂಕಟರಮಣಪ್ಪರನ್ನ ನೆನೆದ ಸದನ – ತಮ್ಮೊಟಿಗಿನ ಭಾಂದವ್ಯ ಸ್ಮರಿಸಿದ ಕೆಎನ್ಆರ್




