ಕಟ್ಟಿಕೊಂಡ ಗಂಡನಿಗೆ ಚಟ್ಟ ಕಟ್ಟಿದ ಪಾಪಿ ಪತ್ನಿ.! Murder ಮಾಡಿ ಅಪಘಾತವೆಂದು ಬಿಂಬಿಸೋಕೆ ಹೋಗಿ ತಗ್ಲಾಕೊಂಡ ಜೋಡಿ.!

ಇತ್ತೀಚಿನ ದಿನಗಳಲ್ಲಿ ಕೆಟ್ಟ ಮೋಹಕ್ಕೆ ಬಿದ್ದು, ಗಂಡ- ಹೆಂಡ್ತಿಯರನ್ನೇ ಕೊಲೆ ಮಾಡುವ ಮಟ್ಟಕ್ಕೆ ಹೋಗ್ತಾ ಇದ್ದಾರೆ. ಈಗ ಅಂತಹದ್ದೇ ಘಟನೆಯೊಂದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖಿಳೆಗಾಂವ ಗ್ರಾಮದಲ್ಲಿ ನಡೆದಿದೆ. ಇಲ್ಲೊಬ್ಬಳು ಖತರ್ನಾಕ್ ಲೇಡಿ ತನ್ನ ಸರಸದಾಟಕ್ಕೆ ಅಡ್ಡಿಯಾಗ್ತಾನೆ ಅಂತ ಪ್ರಿಯಕರನ ಜೊತೆ ಸೇರಿ ಕಟ್ಟಿಕೊಂಡ ಪತಿಯನ್ನೇ ಕೊಲೆಗೈದು, ಬಳಿಕ, ಅಪಘಾತವೆಂದು ಬಿಂಬಿಸೋಕೆ ಹೋಗಿ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾಳೆ.
ಅಕ್ರಮ ಸಂಬಂಧಕ್ಕೆ ಅಡಿಯಾಗ್ತಾನೆ ಅಂತ ಕೊಲೆ
ಖಿಳೆಗಾಂವ ಗ್ರಾಮದ ಚಂದ್ರಕಾಂತ ಶಿವಪೂಜೆ ಹಾಗೂ ಆರೋಪಿ ಮಹಾಂತೇಶ ದನಾಳೆ ಇಬ್ಬರೂ ಕಬ್ಬು ಕಟಾವು ಕೆಲಸ ಮಾಡುತ್ತಿದ್ದು, ಹಣಕಾಸು ವ್ಯವಹಾರ ಹಾಗೂ ಸಂಬಳದ ವಿಚಾರವಾಗಿ ಮಹಾಂತೇಶ ಆಗಾಗ ಚಂದ್ರಕಾಂತ ಮನೆಗೆ ಬರುತ್ತಿದ್ದನಂತೆ. ಈ ವೇಳೆ ಚಂದ್ರಕಾಂತನ ಪತ್ನಿ ರೇಣುಕಾ ಜೊತೆ ಮಹಾಂತೇಶನಿಗೆ ಪರಿಚಯ ಬೆಳೆದಿದ್ದು, ಬಳಿಕ ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತಂತೆ. ಬಳಿಕ ಈ ವಿಚಾರ ಅದ್ಯೆಗೋ ಪತಿ ಚಂದ್ರಕಾಂತನ ಗಮನಕ್ಕೆ ಬಂದಿದ್ದು, ಎರಡು ಬಾರಿ ರಾಜಿ ಪಂಚಾಯ್ತಿ ನಡೆಸಿ ಆಕೆಗೆ ಬುದ್ದಿವಾದ ಕೂಡ ಹೇಳಿದ್ದಾರೆ.
ಇದನ್ನು ಓದಿ : ಕ್ಷುಲ್ಲಕ ಕಾರಣಕ್ಕೆ ಗಲಾಟೆ.. ಚಾಕುವಿನಿಂದ ಚುಚ್ಚಿ ಯುವಕನ ಕೊಲೆ.!

ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ
ಇನ್ನು ಇತ್ತೀಚೆಗೆ ರೇಣುಕಾಗೆ ಕಾಮಾಲೆ ಕಾಣಿಸಿಕೊಂಡಿದ್ದು, ಇದೇ ಸಮಯವನ್ನ ಉಪಯೋಗಿಸಿಕೊಂಡ ಪತ್ನಿ ಪ್ರಿಯಕರನ ಜೊತೆ ಸೇರಿ ಸಂಚು ರೂಪಿಸಿ, ಆಗಸ್ಟ್ 8ರಂದು ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಔಷಧಿ ತರಲು ಚಂದ್ರಕಾಂತನನ್ನು ಐನಾಪುರಕ್ಕೆ ಕಳುಹಿಸಿದ್ದ ರೇಣುಕಾ, ಪತಿ ಮನೆಯಿಂದ ಹೊರಟ ಕೂಡಲೇ ಪ್ರಿಯಕರ ಮಹಾಂತೇಶನಿಗೆ ಮಾಹಿತಿ ನೀಡಿದ್ದಾಳೆ. ಚಂದ್ರಕಾಂತ ಗ್ರಾಮದಿಂದ ಸುಮಾರು ಎರಡು ಕಿಲೋಮೀಟರ್ ದೂರ ಬರುತ್ತಿದ್ದಂತೆ, ಮೊದಲೇ ಹೊಂಚು ಹಾಕಿ ಕುಳಿತಿದ್ದ ಮಹಾಂತೇಶ ದಾಳಿ ನಡೆಸಿ, ಕಬ್ಬಿಣದ ರಾಡ್ನಿಂದ ಹಿಂದಿನಿಂದ ಹೊಡೆದು, ಬಳಿಕ ಮುಖ, ಕೈ ಹಾಗೂ ಕಾಲುಗಳಿಗೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಯತ್ನ
ಕೊಲೆ ಬಳಿಕ ಚಂದ್ರಕಾಂತನ ಬೈಕ್ನ್ನು ಒಡೆದು, ಇದೊಂದು ಅಪಘಾತ ಎಂದು ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದಾರೆ. ಆದರೆ ಮೃತನ ಕುಟುಂಬಸ್ಥರಿಗೆ ಇದು ಅಪಘಾತವಲ್ಲ, ಕೊಲೆ ಎಂಬ ಅನುಮಾನ ವ್ಯಕ್ತವಾಗಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣದ ಬೆನ್ನು ಹತ್ತಿದಾಗ ಕೊಲೆಯ ಹಿಂದಿನ ರಹಸ್ಯ ಬಯಲಾಗಿದ್ದು, ಸದ್ಯ ಆರೋಪಿ ಪತ್ನಿ ರೇಣುಕಾ ಹಾಗೂ ಪ್ರಿಯಕರ ಮಹಾಂತೇಶನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : ಬಸ್ಗಾಗಿ ವಿದ್ಯಾರ್ಥಿಗಳ ಪರದಾಟ – ಕೆಎಸ್ಆರ್ಟಿಸಿ ಬಸ್ ತಡೆದು ಪ್ರತಿಭಟನೆ




