ರೈತ Suicide – ಮೂರು ದಿನಗಳ ಬಳಿಕ ಧರ್ಮಾ ನದಿಯಲ್ಲಿ ಮೃತದೇಹ ಪತ್ತೆ.!

ಸಾಲ ಬಾಧೆಯಿಂದ ಮನನೊಂದು ರೈತರೊಬ್ಬರು ಧರ್ಮಾ ನದಿಗೆ ಬಿದ್ದು, Suicide ಮಾಡಿಕೊಂಡಿರುವ ದಾರುಣ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಂಬಳಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಹೊಂಬಳಿ ಗ್ರಾಮದ ಮೈಲಾರೆಪ್ಪ ಶಿವಾನಂದಪ್ಪ ಹರಿಜನ ಎಂದು ಗುರುತಿಸಲಾಗಿದೆ.
ಇದನ್ನು ಓದಿ : ಲೇಡಿ ಸೂಪರ್ವೈಸರ್ ಕಿರುಕುಳಕ್ಕೆ ಬೇಸತ್ತು ಮಹಿಳೆ Suicide!
ನದಿಗೆ ಹಾರಿ ಮೈಲಾರಪ್ಪ ಆತ್ಮಹತ್ಯೆ
ಇನ್ನು ಮೈಲಾರಪ್ಪ ಅವರು, ಕೃಷಿ ಚಟುವಟಿಕೆಗಾಗಿ ಸಹಕಾರಿ ಸಂಘ ಹಾಗೂ ಕೈಸಾಲ ಸೇರಿದಂತೆ ಸುಮಾರು ಎರಡು ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ರಂತೆ. ಆದ್ರೆ ಕಳೆದ ಎರೆಡು ವರ್ಷಗಳಿಂದ ನಿರೀಕ್ಷತ ಪ್ರಮಾಣದಲ್ಲಿ ಬೆಳೆ ಬಾರದ ಹಿನ್ನಲೆಯಲ್ಲಿ ಸಾಲ ತೀರಿಸಲು ಸಾಧ್ಯವಾಗದೇ ಮನನೊಂದಿದ್ರಂತೆ. ಇನ್ನು ಆಗಸ್ಟ್ 6ರಂದು ರಾತ್ರಿ 11 ಗಂಟೆ ಸುಮಾರಿಗೆ ಹೋಗಿ ಧರ್ಮಾ ನದಿಗೆ ಹಾರಿ ಮೈಲಾರಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂಎ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ, ಬೋಟ್ ಮೂಲಕ ಶೋಧ ಕಾರ್ಯಾಚರಣೇ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.

ಧರ್ಮಾ ನದಿಯಲ್ಲಿ ಮೃತದೇಹ ಪತ್ತೆ.!
ಇದೀಗ ಮೂರು ದಿನಗಳ ಬಳಿಕ ಮೈಲಾರಿ ಅವರ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಘಟನೆ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : T.B.JAYACHANDRA ಅಸಮಾಧಾನ ತಣಿಸಿದ CM D.K.SHIVAKUMAR





