ಪ್ರೀತಿಸಿ ಅಂತರ್ಜಾತಿ ಮದುವೆ ಆಗಿದ್ದಕ್ಕೆ ಯುವಕನ ಬರ್ಬರ MURDER – 13 ದಿನಗಳ ಬಳಿಕ ನದಿ ದಂಡೆಯಲ್ಲಿ ಯುವಕನ ಅಸ್ಥಿಪಂಜರ ಪತ್ತೆ.!

ಲವ್ ಮ್ಯಾರೇಜ್ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಉಂಟಾಗಿದ್ದ ವೈಷಮ್ಯ ಇದೀಗ ಯುವಕನೊಬ್ಬನ ಸಾವಿನಲ್ಲಿ ಕೊನೆಗೊಂಡಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ಪುನೀತ್ ಕುಮಾರ್ ಶಿಗ್ಲಿ ಕೊಲೆಯಾದ ಯುವಕ. ಯುವತಿಯ ಕುಟುಂಬದವರೇ ಪುನೀತ್ ಕುಮಾರ್ನನ್ನ MURDER ಮಾಡಿ, ಮೃತದೇಹವನ್ನ ತುಂಗಭದ್ರಾ ನದಿಗೆ ಎಸೆದಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಮದುವೆಗೆ ಯುವತಿಯ ಕುಟುಂಬಸ್ಥರು ವಿರೋಧ
28 ವರ್ಷದ ಪುನೀತ್ ಕುಮಾರ್, 2024ರಲ್ಲಿ ಬೇರೆ ಜಾತಿಯ ಅಕ್ಷತಾ ಎಂಬ ಯುವತಿಯನ್ನ ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದ, ಆದ್ರೆ ಮದುವೆಗೆ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ರಂತೆ. ಬಳಿಕ ಇಬ್ಬರ ನಡುವೆ ವೈಮನಸ್ಸು ಉಂಟಾಗಿ, ಡಿವೋರ್ಸ್ಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತಂತೆ. ಇನ್ನು ಸೆಪ್ಟಂಬರ್ 7 ರಂದು ಕೋಡಿಯಾಲ ಹೊಸಪೇಟೆಯ ಗಂಗಾಪರಮೇಶ್ವರಿ ದೇವಸ್ಥಾನದ ಬಳಿ, ಪುನೀತ್ ವಾಲಿಬಾಲ್ ಆಡುತ್ತಿದ್ದ ವೇಳೆ, ಅಕ್ಷತಾ ಸಹೋದರ ಅಭಿಷೇಕ್ ಗೋಣೆಪ್ಪನವರ್ ಹಾಗೂ ಅಭಿಷೇಕ್ ರೆಡ್ಡಿ ಎಂಬುವರು ಪುನೀತ್ ಜೊತೆ ಜಗಳ ತೆಗೆದು ಹಲ್ಲೆ ನಡೆಸಿ, ನಮ್ಮ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದೀಯಾ. ಮುಂದೆ ನೋಡ್ತೀವಿ ಎಂದು ಬೆದರಿಕೆ ಹಾಕಿ ಹೋಗಿದ್ರಂತೆ.

READ THIS : ಬೆಂಗಳೂರಿನ ಪಾಳು ಬಿದ್ದ ಸೈಟ್ನಲ್ಲಿ ಮಹಿಳೆಯ ಶವ ಪತ್ತೆ.!
13 ದಿನಗಳ ಬಳಿಕ ಯುವಕನ ಅಸ್ಥಿಪಂಜರ ಪತ್ತೆ.!
ಇನ್ನು ಅದೇ ದಿನ ರಾತ್ರಿ ಊಟ ಮುಗಿಸಿಕೊಂಡು ಹೊರಗೆ ತೆರಳಿದ್ದ, ಪುನೀತ್ ಮನೆಗೆ ವಾಪಸ್ ಆಗಿರಲಿಲ್ಲ, ಈ ಸಂಬಂಧ ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಪುನೀತ್ಗಾಗಿ ಹುಡುಕಾಟ ನಡೆಸುತ್ತಿದ್ದರು. ಆದ್ರೆ ಸೆಪ್ಟೆಂಬರ್ 20ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹರ್ಲಾಪುರ ಗ್ರಾಮದ ಬಳಿ ತುಂಗಭದ್ರಾ ನದಿ ದಂಡೆಯಲ್ಲಿ, ಅಪರಿಚಿತ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿತ್ತು. ಅಸ್ಥಿಪಂಜರದ ಬಳಿ ಕೆಂಪು-ನೀಲಿ ಚೆಕ್ಸ್ ಶರ್ಟ್ ಹಾಗೂ ಕಪ್ಪು ಬಣ್ಣದ ಬರ್ಮುಡಾ ಪತ್ತೆಯಾಗಿತ್ತು. ಈ ಬಟ್ಟೆಗಳು ಪುನೀತ್ ಕುಮಾರ್ ನಾಪತ್ತೆಯಾಗುವ ಸಂದರ್ಭದಲ್ಲಿ ಧರಿಸಿದ್ದ ಬಟ್ಟೆಗಳೇ ಎಂದು ಕುಟುಂಬಸ್ಥರು ಗುರುತಿಸಿದ್ದು, ಪತ್ತೆಯಾದ ಅಸ್ಥಿಪಂಜರ ಪುನೀತ್ ಕುಮಾರ್ನದ್ದೇ ಎಂಬುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೆ ಅಂತರ್ಜಾತಿ ವಿವಾಹವೇ ಕಾರಣಾನಾ..?
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಅಕ್ಷತಾ ಸೇರಿ ಒಟ್ಟು ಆರು ಜನರ ವಿರುದ್ಧ ದೂರು ದಾಖಲಾಗಿದ್ದು, ಅದರಲ್ಲಿ ಯುವತಿಯ ಸಹೋದರ ಅಭಿಷೇಕ್ ಗೋಣೆಪ್ಪನವರ ಹಾಗೂ ಆತನ ಸ್ನೇಹಿತ ಅಭಿಷೇಕ್ ರೆಡ್ಡಿ ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಪುನೀತ್ ಕೊಲೆಗೆ ಅಂತರ್ಜಾತಿ ವಿವಾಹವೇ ಕಾರಣವೇ..? ಅಥವಾ ಬೇರೆ ಯಾವುದಾದ್ರೂ ಕಾರಣ ಇದೆಯಾ ಅನ್ನೋದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

MUST WATCH : ಖಾಲಿ ಚೊಂಬು ಖಾಲಿ ಚಿಪ್ಪು ಹಿಡಿದು ಸರ್ಕಾರದ ವಿರುದ್ದ ದೋಸ್ತಿಗಳ ಗುಡುಗು




