Haveri : ರೈತರ ಸಂಕಷ್ಟಕ್ಕೆ ಆಸರೆಯಾಗಬೇಕಿದ್ದ ಬೆಳೆವಿಮೆ ಪರಿಹಾರದಲ್ಲೇ ಗೋಲ್ಮಾಲ್!

ರೈತರ ಸಂಕಷ್ಟಕ್ಕೆ ಆಸರೆಯಾಗಬೇಕಿದ್ದ ಬೆಳೆವಿಮೆ ಪರಿಹಾರದಲ್ಲೇ ಗೋಲ್ಮಾಲ್ ನಡೆದಿದೆಯಾ..? ಸರ್ಕಾರಿ ಜಮೀನಿನ ಹೆಸರಿನಲ್ಲಿ ನಕಲಿ ಎಫ್ಐಡಿ ಸೃಷ್ಟಿಸಿ, ಬೆಳೆವಿಮೆ ಪರಿಹಾರದ ಹಣವನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾಯಿಸಲಾಗಿದೆ ಎಂಬ ಗಂಭೀರ ಆರೋಪ Haveri ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕೇಳಿಬಂದಿದೆ.
25ರಷ್ಟು ಹಣವನ್ನು ಕಮಿಷನ್ ರೂಪದಲ್ಲಿ ನೀಡುವಂತೆ ಒತ್ತಡ
ಇದಲ್ಲದೆ, ಬೆಳೆವಿಮೆ ಪರಿಹಾರಕ್ಕೆ ಸಂಬಂಧಿಸಿದಂತೆ ಕೆಲವು ಮಧ್ಯವರ್ತಿಗಳ ವಿರುದ್ಧವೂ ಗಂಭೀರ ಆರೋಪ ಕೇಳಿಬಂದಿದೆ. ರೈತರ ಹೆಸರಿನಲ್ಲಿ ಬಂದ ಬೆಳೆವಿಮೆ ಪರಿಹಾರದ ಹಣದಲ್ಲಿ 50:50ರಷ್ಟು ಪಾಲು ಕೇಳಲಾಗಿದೆ ಎಂಬ ಆರೋಪ ಒಂದೆಡೆಯಾದ್ರೆ, ರೈತರೇ ಪ್ರೀಮಿಯಂ ಪಾವತಿಸಿ ಪಡೆದ ಪರಿಹಾರದಲ್ಲೂ ಶೇಕಡಾ 25ರಷ್ಟು ಹಣವನ್ನು ಕಮಿಷನ್ ರೂಪದಲ್ಲಿ ನೀಡುವಂತೆ ಕೆಲ ಫಲಾನುಭವಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಆರೋಪಗಳಿಗೂ ಅಧಿಕೃತ ತನಿಖೆಯ ಮೂಲಕ ಸ್ಪಷ್ಟತೆ ಸಿಗಬೇಕಿದೆ.
READ THIS : ರಾಜ್ಯದಲ್ಲಿ ಕೈ ಕೊಟ್ಟ ಮಳೆರಾಯ – ತಾಪಮಾನ ಏರಿಕೆ!

ಅಕ್ರಮದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಭಾಗಿ?
ಇನ್ನು ಈ ಅಕ್ರಮದಲ್ಲಿ ಕೃಷಿ ಇಲಾಖೆಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಾಮೀಲಾಗಿದ್ದಾರಾ? ನಕಲಿ ಎಫ್ಐಡಿ ಸೃಷ್ಟಿಗೆ ಒಳಗಿನಿಂದಲೇ ಮಾಹಿತಿ ಸಿಕ್ಕಿದ್ಯಾ? ಸರ್ಕಾರಿ ಜಮೀನಿನ ಮೇಲೆ ಬೆಳೆವಿಮೆ ಹೇಗೆ ಮಂಜೂರಾಯ್ತು? ರೈತರ ಹೆಸರಿನ ಪರಿಹಾರ ಹಣ ಬೇರೆಯವರ ಖಾತೆಗೆ ಹೇಗೆ ಹೋಯಿತು? ಈ ಹಿಂದೆ ವಿಮಾ ಕಂಪನಿಗಳಲ್ಲಿ ಕೆಲಸ ಮಾಡಿದ್ದ ಕೆಲ ಸಿಬ್ಬಂದಿ ಹಾಗೂ ಮಧ್ಯವರ್ತಿಗಳ ಪಾತ್ರವೂ ಇದರಲ್ಲಿ ಇದ್ಯಾ ಎಂಬ ಅನುಮಾನ ವ್ಯಕ್ತವಾಗ್ತಿದ್ದು, ಸಮಗ್ರ ತನಿಖೆಯಿಂದಲೇ ಸತ್ಯಹೊರಬರಬೇಕಿದೆ.
ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹ
ಇನ್ನಾದ್ರೂ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಸಂಬಂಧಪಟ್ಟ ವಿಮಾ ಸಂಸ್ಥೆಗಳು ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಿ, ಅಕ್ರಮ ನಡೆದಿರುವುದು ಸಾಬೀತಾದ್ರೆ ಮಧ್ಯವರ್ತಿಗಳು, ಏಜೆಂಟರು ಅಥವಾ ಅಧಿಕಾರಿಗಳು ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
MUST WATCH : ಹಾವೇರಿಯಲ್ಲಿ ಬೀದಿ ನಾಯಿಗಳ ಹಾವಳಿ – ಕಡಿವಾಣ ಹಾಕುವವರು ಯಾರು.?




