Suicide | ಗಂಡನ ಮನೆಯವರ ಕಿರುಕುಳಕ್ಕೆ ಮಹಿಳೆ ಸಾವು? ಗಂಡನ ಮನೆ ಮುಂದೆ ಪ್ರತಿಭಟಿಸಿ ಆಕ್ರೋಶ

ಗಂಡನ ಸಾವಿನ ಬಳಿಕ ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಆರೋಪ ಕೇಳಿಬಂದಿದೆ. ಮಗಳನ್ನು ಕಳೆದುಕೊಂಡ ಆಕ್ರೋಶದಲ್ಲಿ ಕುಟುಂಬಸ್ಥರು ಮೃತದೇಹವನ್ನು ಗಂಡನ ಮನೆಯ ಮುಂದೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಲುವೆಕಲ್ಲಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹೃದಯಾಘಾತದಿಂದ ಪತಿ ಸಾವು!
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಲುವೆಕಲ್ಲಪುರ ಗ್ರಾಮದ 28 ವರ್ಷದ ನೀಲವ್ವ ನೀರಲಗಿ ಎಂಬ ವಿವಾಹಿತ ಮಹಿಳೆ Suicide ಗೆ ಶರಣಾಗಿರುವ ಘಟನೆ ನಡೆದಿದೆ. ನೀಲವ್ವ ಅವರ ಪತಿ ಶಿವಾನಂದ ಅವರು ಕಳೆದ ಮೂರು ತಿಂಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು.
ಇದನ್ನು ಓದಿ : ಲಾಡ್ಜ್ನಲ್ಲಿ ಬ್ಯಾಂಕ್ ಮ್ಯಾನೇಜರ್ Suicide – ಆಗಿದ್ದೇನು?

ಗಂಡನ ಮನೆಯವರಿಂದ ಮಾನಸಿಕ ಕಿರುಕುಳ
ಪತಿಯ ಸಾವಿನ ಬಳಿಕ ನೀಲವ್ವಗೆ ಗಂಡನ ಮನೆಯವರು ಹಾಗೂ ಸಂಬಂಧಿಕರು ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ವಿವಾಹಿತ ಮಹಿಳೆಯ ಕುಟುಂಬಸ್ಥರ ಆರೋಪ ಮಾಡಿದ್ರು. ನಿನ್ನ ಗಂಡನ ಜೊತೆ ನೀನೂ ಸತ್ತು ಹೋಗಬೇಕಿತ್ತು. ನೀನು ನಮ್ಮ ಪಾಲಿನ ದರಿದ್ರ. ನಿನ್ನ ಗಂಡನ ಆಸ್ತಿಯನ್ನು ಕೊಟ್ಟು ಬೀಡು ಎಂದೆಲ್ಲಾ ಕಟುವಾಗಿ ಮಾತನಾಡಿ ಹಿಂಸೆ ಕೊಡ್ತಾ ಇದ್ದರಿಂದ ಮನನೊಂದ ವಿವಾಹಿತ ಮಹಿಳೆ ಸಾವನ್ನಪ್ಪಿದ್ದಾರೆ.
Suicide – ಮಹಿಳೆಯ ಸಾವಿಗೆ ನ್ಯಾಯ ಸಿಗಬೇಕು
ಇನ್ನು ವಿವಾಹಿತ ಮಹಿಳೆಯ ಸಾವಿಗೆ ನ್ಯಾಯ ಸಿಗಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಮಹಿಳೆಯ ಕುಟುಂಬಸ್ಥರು ಗಂಡನ ಮನೆಯವರ ಮುಂದೆ ಪ್ರತಿಭಟನೆ ನಡೆಸಿದ್ರು. ಸದ್ಯ ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನು ನೋಡಿ : HDK ಕನಸಿನ ಕೂಸು ಈಗ ಪಾಪದ ಕೂಸಾಗಿದೆ – KUMARASWAMYಗೆ COUNTER ಕೊಟ್ಟ DKS




